ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ರಾಯರಚಾವಡಿಯ ಪಂಜುರ್ಲಿ , ಪಿಲಿಚಾಮುಂಡಿ, ಕಲ್ಲುರ್ಟಿ , ಕಲ್ಕುಡ ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ ಶನಿವಾರ ಸಂಜೆ ನಡೆಯಿತು. ಎಣ್ಣೆ ಬೂಳ್ಯ ಅತ್ಯಂತ ವಿಶಿಷ್ಟವಾಗಿದ್ದು ಊರು ಹಾಗೂ ಪರವೂರುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.








