ಕೈಕಂಬ:ವಿದ್ಯಾರ್ಥಿಗಳು ದೇಶದ ಭವಿಷ್ಯ, ಮಕ್ಕಳಿಗೆ ಪೋಷಕರು, ಸಮಾಜ ಮಾರ್ಗದರ್ಶನ ನೀಡಿದಂತೆ ಅವರು ಬೆಳೆಯುತ್ತಾರೆ. ಗ್ರಾಮೀಣ ಮಕ್ಕಳು ಮುಗ್ದರು, ಅವರಲ್ಲಿ ತುಂಬಾ ಕನಸುಗಳಿರುತ್ತದೆ ತಮ್ಮ ಮಕ್ಕಳು ಯಾವ ವಿಷಯದಲ್ಲಿ ಅಭಿರುಚಿಯನ್ನು ಹೊಂದಿದ್ದಾರೆ ಎಂದು ಹೆತ್ತವರು ತಿಳಿದುಕೊಳ್ಳಬೇಕು, ಮತ್ತು ಅದನ್ನು ಬೆಳೆಸಲು ಉತ್ತೇಜನ ನೀಡಬೇಕು . ಎಂದು ಕೈಕಂಬ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಪ್ರಬಂಧಕರಾದ ಋಷಿಕುಮಾರ್ ದುಬೆ ನುಡಿದರು. ಅವರು ಗುರುಪುರ ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ , ನೇಸರ ಕೇಂದ್ರೀಯ ಸಮನ್ವಯ ಸಮಿತಿ ಹಾಗೂ ದಿಶಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

24 vp vidyarthi vethana

1

2

3

4

 

6

7

8

9

10

11

12

13

14

15

16

17

24 vp vidyarthi vethan 1

24 vp vidyarthi vethana
ಇನ್ನೋರ್ವ ಅತಿಥಿ ಶ್ರೀದೇವಿ ಹೋಟೆಲ್ ಮಾಲಕ ಹಾಗೂ ಕೈಕಂಬ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ ಮಕ್ಕಳು ದುಶ್ಚಟಗಳಿಂದ ದೂರವಿರಬೇಕಾದರೆ ಹೆತ್ತವರೇ ಅವರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಗುರುಪುರ ಸ್ಪಂದನ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರು ಉಳಿಸಿ ಒಟ್ಟು ಮಾಡಿದ ಮೊಬಲಗನ್ನು ತಮ್ಮ ಸಂಘಗಳ ಸದಸ್ಯರ 8ನೇ ತರಗತಿ ಓದುತ್ತಿರುವ 38 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿತು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹೋಟೆಲ್ ಸ್ವಾಗತ್ ಮಾಲಕರಾದ ಜಗದೀಶ್, ದಿಶಾ ಟ್ರಸ್ಟ್‍ನ ನಿರ್ದೇಶಕರು ಸಿಲ್ವೆಸ್ಟರ್ ಡಿ ಸೋಜ, ಸ್ಪಂದನ ಒಕ್ಕೂಟದ ಕುಮಾರಿ ಅನುಸೂಯ ಕಾಜವ, ಕಾರ್ಯದರ್ಶಿ ಸವಿತ ಕೊಳವೂರು, ನೇಸರ ಕೇಂದ್ರೀಯ ಸಮಿತಿ ಅಧ್ಯಕ್ಷರಾದ ನೋಬರ್ಟ್ ಸಿಕ್ವೇರ ಕಾರ್ಯದರ್ಶಿ ಜ್ಯೋತಿ ಲೂಯಿಸ್ ಉಪಸ್ಥಿತರಿದ್ದರು.ಹೆನ್ರಿವಾಲ್ಡರ್ ಪ್ರಾಸ್ತಾವಿಕ ಮಾತನಾಡಿದರು.
ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಎಲ್ಸಿ ಡಿ ಸೋಜ ವಂದಿಸಿದರು.

By suddi9

Leave a Reply

Your email address will not be published. Required fields are marked *