ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲ್ ನೌಕರ ರೈಲಿನಡಿಗೆ ಬಿದ್ದು ದುರ್ಮರಣ ಹೊಂದಿದ ಘಟನೆ ಬಿ.ಸಿ.ರೋಡು ಬಳಿ ಶುಕ್ರವಾರ ಸಂಭವಿಸಿದೆ. ಮೃತನನ್ನು ಬಸಪ್ಪ (36) ಎಂದು ಗುರುತಿಸಲಾಗಿದೆ.
ಬಸಪ್ಪ ರೈಲ್ವೇ ನಿಲ್ದಾಣ ಸಮೀಪ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ರೈಲು ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ರೈಲಿನ ಹೊಡೆತಕ್ಕೆ ಮೃತದೇಹ ಚೂರಾಗಿದ್ದು ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಘಟನಾ ಸ್ಥಳದಲ್ಲಿ ದೊರೆತ ಡ್ರೈವಿಂಗ್ ಲೇಸನ್ಸ್ ಆಧಾರದಲ್ಲಿ ಗುರುತು ಹಿಡಿಯಲಾಯಿತು. ಘಟನಾ ಸ್ಥಳಕ್ಕೆ ಮಂಗಳೂರು ರೈಲ್ವೇ ಪೊಲೀಸರು ಆಗಮಿಸಿ ತಪಾಸಣೆ ನಡೆಸಿದರು.

train accident

ಬಿ.ಸಿ.ರೋಡು ಬೈಪಾಸ್ ರಸ್ತೆ ಬಳಿ ನಿಮರ್ಾಣಗೊಳ್ಳುತ್ತಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಶಬ್ಧದಿಂದಾಗಿ ರೈಲು ಚಲನೆ ಹಾಗೂ ಆನರ್್ ಕೇಳಿಸದ ಕಾರಣ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಬಸಪ್ಪ ಅವರು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದು ಬಿ.ಸಿ ರೋಡ್ನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *