ಬಂಟ್ವಾಳ: ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈಯವರ ಹಲವು ವರ್ಷಗಳ ಕನಸು ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆಯ ಶಿಲನ್ಯಾಸಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ರr  rai

ನೇತ್ರವತಿ ಸಹಸ್ರಾರು ಜನರಿಗೆ ನೇತ್ರಾವತಿ ನೀರಿನ ಆಸರೆಯಾಗಿದ್ದಾಳೆ. ಘಟ್ಟಪ್ರದೇಶದಲ್ಲಿ ಹುಟ್ಟಿದರೂ ಹರಿದು ಬರಲು ಬಹುಭಾಗ ತನ್ನ ಒಡಲನ್ನು ವಿಸ್ತರಿಸಿಕೊಂಡಿರುವುದು ಬಂಟ್ವಾಳ ತಾಲೂಕಿನ ಭೂ ಪ್ರದೇಶವು  ತಾಲೂಕಿನ ಬಹುತೇಕ ಗ್ರಾಮಗಳು ಇರುವುದು ಕೂಡ ಇದೇ ನೇತ್ರಾವತಿ ತಟದಲ್ಲಿ.  ಸಮೃದ್ದ ನೀರಿನ ಆಸರೆಯಿರುವ ನೇತ್ರಾವತಿಯನ್ನು ತನ್ನ ಒಡಲಲ್ಲೇ ಇಟ್ಟುಕೊಂಡಿದ್ದರೂ ಬಂಟ್ವಾಳದ ಜನತೆಗೆ ಮಾತ್ರ ನದಿ ನೀರು ಬಳಸುವ ಅವಕಾಶವಿರಲಿಲ್ಲ. ನೆರೆಯ ಮಂಗಳೂರು ತಾಲೂಕಿನ ಮಹಾಜನತೆಗೆ ನಿತ್ಯ ಕುಡಿಯುವ ನೀರು ಪೂರೈಸುವ ನೇತ್ರಾವತಿ ಬಂಟ್ವಾಳದ ಜನರ ಪಾಲಿಗೆ ವರದಾನವಾಗಿಲ್ಲ ಎನ್ನುವುದು ಈವರೆಗೆ ಕೇಳಿ ಬರುತ್ತಿದ್ದ ಆರೋಪ.

ಆದರೆ ಇನ್ನು ಆ ಪರಿಸ್ಥಿತಿ ಇಲ್ಲ ಯಾಕೆಂದರೆ ನೇತ್ರಾವತಿ ನದಿಯಿಂದಲೇ ಮೇಲೆತ್ತಿದ ನೀರನ್ನು ಶುದ್ದೀಕರಿಸಿ, ಬಂಟ್ವಾಳ ತಾಲೂಕಿನ ಗ್ರಾಮಗಳಿಗೆ ಸರಬರಾಜು ಮಾಡುವ ಕೋಟ್ಯಾಂತರ ರುಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಮೊದಲ ಎರಡು ಯೋಜನೆಗಳಿಗೆ ಜ. 13ರಂದು ಶಿಲನ್ಯಾಸ ನೆರವೇರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ಯೋಜನೆ ಕಾರ್ಯರೂಪಗೊಳ್ಳಲಿದೆ.
ಸಚಿವ ರೈ ಕನಸು:
ಈ ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈಯವರ ಕನಸಿನ ಕೂಸು. ಮಳೆಗಾಲ ಮುಗಿಯುತ್ತಿದ್ದಂತೆ ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದ ಜನರನ್ನು ಕಾಡುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಅವರು ಕಳೆದ 13 ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನ ಈಗ ಫಲ ನೀಡುತ್ತಿದೆ. ಈ ಹಿಂದೆ ಕಿನ್ನಿಗೋಳಿಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸಿದಾಗ ದ.ಕ. ಜಿಲ್ಲೆಗೆ ಈ ಯೋಜನೆ ಅಗತ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಜನತೆಯ ಅಗತ್ಯತೆಯ ದೃಷಿಯಿಂದ ಆಗ ಶಾಸಕರಾಗಿದ್ದ ರಮಾನಾಥ ರೈ ವಿಶೇಷ ಮುತವರ್ಜಿ ವಹಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮನವೊಲಿಸಿ ಯೋಜನೆಯನ್ನು ಇಲ್ಲಿಗೆ ತರಿಸಿಕೊಳ್ಳುವಲ್ಲಿ ವಿಶೇಷ ಪ್ರಯತ್ನ ನಡೆಸಿದ್ದಾರೆ.

ಇದೀಗ ಯೋಜನೆ ಸರ್ಕಾರದಿಂದ ಮಂಜೂರುಗೊಂಡಿದ್ದು ಮೊದಲ ಹಂತದಲ್ಲಿ ಎರಡು ಯೋಜನೆಗಳಿಗೆ ಶಿಲನ್ಯಾಸ ನಡೆಯಲಿದೆ. ನದಿ ತಟದಲ್ಲಿ ಜಾಕ್ವೆಲ್ ನಿರ್ಮಿ ಸಿ ಅಲ್ಲಿ ನದಿಯಿಂದ ಮೇಲೆತ್ತಲ್ಪಟ್ಟ ನೀರನ್ನು ಶುದ್ದೀಕರಿಸಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಿರ್ಮಿಸಿದ ಮೇಲ್ಮಟ್ಟದ ಜಲಸಂಗ್ರಹಣ ಟ್ಯಾಂಕ್ಗಳಿಗೆ ರವಾನಿಸಿ ಗ್ರಾಮಗಳಲ್ಲಿ ಈಗಾಗಲೇ ಇರುವ ಟ್ಯಾಂಕ್ಗಳಿಗೆ ಪೂರೈಕೆ ಮಾಡುವ ಯೋಜನೆ ಇದಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಲಭ್ಯವಾಗುವ ನಿರೀಕ್ಷೆ ಇದ್ದು ಗ್ರಾಮೀಣ ಬಾಗದ ಜನರ ನೀರಿನ ಸಮಸ್ಯೆ ನೀಗಲಿದೆ. ನೀರು ಬಳಕೆದಾರರಿಗೆ ವಿದ್ಯುತ್ ಮೀಟರ್ ಬಳಕೆ ಕಡ್ಡಾಯಗೊಳಿಸುವ ಬಗ್ಗೆ ನಿರ್ಧರಿಸಲಾಗಿದ್ದು ಇದರಿಂದ ನೀರಿನ ಮಿತ ಬಳಕೆ ಸಾಧ್ಯವಾಗಲಿದ್ದು ಬಳಕೆದಾರರಲ್ಲಿ ಜಾಗೃತಿಯೂ ಮೂಡಲಿದೆ. ಈ ಯೋಜನೆಯ ಮೂಲಕ ನದಿಯ ಯಾವುದೇ ಭಾಗದಿಂದ ಅಥವಾ ಈಗಾಗಲೇ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳಿಂದ ನೀರು ಪಡೆಯುವ ಅವಕಾಶವನ್ನು ಸರ್ಕಾರ ನೀಡಿದೆ. ಇದರ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಜನಪ್ರತಿನಿಧಿಗಳ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

By Suddi9

Leave a Reply

Your email address will not be published. Required fields are marked *