ಖಾನಾಪುರ : ಅಕ್ರಮ ಗೋಸಾಗಾಟದ ಟೆಂಪೋವನ್ನು ತಡೆದು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆಯಿಂದ ಕುಪಿತನಾದ ಪೊಲೀಸಪ್ಪ ಹಿಂದೂ ಸಂಘಟನೆಯ ಯುವಕರ ಮೇಲೆ ಕೇಸ್ ಜಡಿಯುವುದಾಗಿ ಬೆದರಿಸಿದ ಘಟನೆ ಖಾನಾಪುರ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಖಾನಾಪುರದ ಸದ್ರುದ್ದೀನ್ ಬೇಪಾರಿ ಎಂಬಾತ ಟೆಂಪೋದಲ್ಲಿ ಗೋಮಾಂಸವನ್ನು ಹೇರಿಕೊಂಡು ಹೋಗುತ್ತಿದ್ದನು. ಜಯಭೀಮ ಎಂದು ಬರೆದಿರುವ ಆ ಟೆಂಪೋದಲ್ಲಿ ಭಗವಾನ್ ಶ್ರೀಕೃಷ್ಣನ ಭಾವಚಿತ್ರವಿದ್ದಿತ್ತು. ಈ ಟೆಂಪೋ ಖಾನಾಪುರದಿಂದ ಅಲ್ಲಿನ ಮಾಡಿಗುಂಜೀ ಎಂಬ ಹಳ್ಳಿಗೆ ಹೋಗುತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶ್ರೀರಾಮ ಸೇನೆಯ ಕಾರ್ಯಕರ್ತರು ಟೆಂಪೋವನ್ನು ತಡೆದು ಅದರಲ್ಲಿದ್ದ ಗೋಮಾಂಸವನ್ನು ಪತ್ತೆ ಹಚ್ಚಿ ಆರೋಪಿ ಸದ್ರುದ್ದೀನ್ ಬೇಪಾರಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ಆದರೆ ಇಲ್ಲಿನ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸು ಹಿಂದೇಟು ಹಾಕಿದ್ದೇ ಅಲ್ಲದೆ ಶ್ರೀ ರಾಮಸೇನೆಯ ಯುವಕರ ಮೇಲೆ ಕೇಸ್ ಜಡಿಯುವುದಾಗಿ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.
ಇದರಿಂದ ಕುಪಿತರಾದ ಕಾರ್ಯಕರ್ತರು ಶ್ರೀರಾಮ ಸೇನೆಯ ಖಾನಾಪುರ ತಾಲೂಕಿನ ಪ್ರಮುಖರಾದ ಪಂಡಿತ ಓಗಲೆ ಅವರಿಗೆ ತಿಳಿಸಿದ್ದು, ಅವರು ತಕ್ಷಣ ಈ ವಿಷಯವನ್ನು ರಾಜ್ಯದ ಆರಕ್ಷಕ ಮಹಾನಿರೀಕ್ಷಕರು ಮತ್ತು ಜಿಲ್ಲೆಯ ಆರಕ್ಷಕ ಅಧೀಕ್ಷಕರನ್ನು ಸಂಪರ್ಕಿಸಿ ಈ ಮಾಹಿತಿಯನ್ನು ನೀಡಿದರು. ಅವರು ಸಹ ಆರಕ್ಷಕ ನಿರೀಕ್ಷಕರಿಗೆ ದೂರು ದಾಖಲಿಸಿಕೊಳ್ಳಲು ಆದೇಶ ನೀಡಿದರು. ಈ ಘಟನೆಯಿಂದ ಠಾಣೆಯಲ್ಲಿ ನೂರಾರು ಹಿಂದುತ್ವವಾದಿಗಳು ಜಮಾಯಿಸಿದ್ದರು ಎನ್ನಲಾಗಿದೆ.
