ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ ಸರ್ಕಾರ ಮುಖೇಶ ಅಂಬಾನಿ ಕಿಸೆಯಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.. ಈ ಹೇಳಿಕೆಯಿಂದ ವ್ಯಗ್ರಗೊಂಡ ರಿಲಾಯನ್ಸ್ ಕಂಪೆನಿ ಅರವಿಂದ್ ಕೇಜ್ರಿವಾಲ ವಿರುದ್ದ ಮುಂಬೈ ಹೈಕೋಟ್ನಲ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ . ಜೊತೆಗೆ 100 ಕೋಟಿ ರೂಪಾಯಿಯ ಮಾನ ಹಾನ ನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಆರ್ಯಿಎಫ್ ಮಹಾರಾಷ್ಟ್ರದ ವಿಧ್ಯುತ್ ನಿಗಮ ಆಯೋಗದ ಜೊತೆಗೆ ಕುಡಿಕೊಂಡು ಗ್ರಾಹಕರಿಂದ ಹೆಚ್ಚಿನ ಹಣ ವಸೂಲು ಮಾಡಿದೆ ಎಂದು ಅರವಿಂದ ಕೇಜ್ರಿವಾಲ ಸಭಯೆಂದರಲ್ಲಿ ಈ ಹೇಳಿಕೆ ನೀಡಿದ್ದರು.
ನ್ಯಾಮಮೂರ್ತಿ ಎಸ್ಜೆ ಕಥಾವಾಲಾ ಕಂಪೆನಿಯ ಆರೋಪ ಪತ್ರವನ್ನು ಸ್ವಕರಿಸಿ, ಮಾರ್ಚ 7 ರಂದು ಮೂರು ಪ್ರತಿನಿಧೀಯನ್ನಯ ನ್ಯಾಯಾಲಯಕ್ಕೆ ಆಗಮಿಸಲು ಸೂಚಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಯೋಜಕ ಅಂಜಲಿ ದಮಾನಿಯಾ , ಪ್ರೀತಿ ಶರ್ಮಾ ಮೆನನ ಮತ್ತು ಸತೀಷ ಜೈನ್ ರನ್ನು ನ್ಯಾಯಾಲಯಕ್ಕೆ ಹಾಜರಾಗಲು ಮುಂಬೈ ಹೈ ಕೋರ್ಟ್ ತಿಳಿಸಿದೆ.
