ಬಂಟ್ವಾಳ: ತಾಲ್ಲೂಕಿನಾದ್ಯಂತ ವಿವಿಧ ಮಸೀದಿ ಮತ್ತು ಮದರಸಗಳಲ್ಲಿ ಶನಿವಾರ ಸಂಭ್ರಮ ಸಡಗರದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಲಾಯಿತು.
ತಾಲ್ಲೂಕಿನ ಬಿ.ಸಿ.ರೋಡ್ ಸಹಿತ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕಲ್ಲಡ್ಕ, ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ವಿವಿಧ ಗ್ರಾಮೀಣ ಪ್ರದೇಶಗಳಲ್ಲಿಯೂ ನೂರಾರು ಮಂದಿ ಮಕ್ಕಳು ಮತ್ತು ಯುವಕರು ವಾಹನವನ್ನು ಅಲಂಕರಿಸಿಕೊಂಡು ಹಸಿರು ಧ್ವಜ ಹಾರಾಡಿಸುತ್ತಾ ಸಂಭ್ರಮದಿಂದ ಮೆರವಣಿಗೆ ನಡೆಸಿದರು.

ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ನೂರಾನಿಯಾ ಅರೇಬಿಕ್ ದರ್ಸ್, ತಹ್ಲೀಮುಲ್ ಇಸ್ಲಾಂ ಮದರಸ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಮಸೀದಿ, ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಮೆರವಣಿಗೆ ಮತ್ತು ರ್ಯಾಲಿ ನಡೆಯಿತು.
ಬಿ.ಸಿ.ರೋಡ್‍ನ ಮಿತ್ತಬೈಲು, ಬಂಟ್ವಾಳ ಕೆಳಗಿನಪೇಟೆ, ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿ, ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ ಸಂಭ್ರಮದಿಂದ ಈದ್ ಮಿಲಾದ್ ಹಬ್ಬ ನಡೆಸಿದರು.
ತಾಲೀಮು : ಗೂಡಿನಬಳಿ ತಾಲೀಮು ತಂಡದಿಂದ ಆಲಡ್ಕ ಪೇಟೆಯಲ್ಲಿ ವಿವಿಧ ಭಂಗಿಯಲ್ಲಿ ಆಕರ್ಷಕ ತಾಲೀಮು ಪ್ರದರ್ಶನ ನಡೆಯಿತು.
