ಪುತ್ತೂರು: ಬ್ಯಾನರ್ ಹರಿದ ವಿಚಾರಕ್ಕಾಗಿ ವಿದ್ಯಾರ್ಥಿಗಳ ತಂಡ ವೊಂದು ಹಲ್ಲೆ ನಡೆಸಿದೆ ಎಂದು ಆರೋ ಪಿಸಿ ವಿದ್ಯಾರ್ಥಿಯೋರ್ವ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ರಿಕ್ಷಾ ಚಾಲಕನೊಂದಿಗೆ ಬಂದ ವಿದ್ಯಾರ್ಥಿಗಳ ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಮೂವರು ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಂಬೆಟ್ಟು ಕಾಲೇಜಿನ ದ್ವಿತಿಯ ಪಿಯುಸಿ ವಿದ್ಯಾರ್ಥಿ, ಬನ್ನೂರು ನಿವಾಸಿ ಮೊಹಮ್ಮದ್ ಹನೀಫ್(18) ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಡಿ.2ರಂದು ಮಧ್ಯಾಹ್ನ ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ನಮ್ಮ ಕಾಲೇಜಿ ನವನೇ ಆದ ಅಭಿಜಿತ್ ಹಾಗೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಿತ್, ನಿಶಾಂತ್, ಯತೀಂದ್ರ, ಗಿರೀಶ ಹಾಗು ಸುಮಾರು ನಲ್ವತ್ತು ವಿದ್ಯಾರ್ಥಿಗಳ ತಂಡವೊಂದು ಹಲ್ಲೆ ನಡೆಸಿದೆ. ಈ ವೇಳೆ ತಡೆಯಲು ಬಂದ ನನ್ನ ಸ್ನೇಹಿತನಿಗೂ ತಂಡ ಹಲ್ಲೆ ನಡೆಸಿದೆ ಎಂದು ಹನೀಫ್ ಆರೋಪಿಸಿದ್ದಾನೆ.

ಮಿಲಾದ್ ಪ್ರಯುಕ್ತ ಬನ್ನೂರು ಸರ್ಕಲ್‍ನಲ್ಲಿ ಹಾಕಲಾಗಿದ್ದ ಕಟೌಟ್‍ಗೆ ಡಿ.30ರಂದು ಯಾರೋ ಹಾನಿ ಮಾಡಿದ್ದರು. ಜ.1ರಂದು ರಾತ್ರಿ ನಾವು ಬಂಟಿಂಗ್ಸ್‍ಗಳನ್ನು ಹಾಕುತ್ತಿದ್ದ ವೇಳೆ ಅಲ್ಲಿಗೆ ಬಂದ ಸ್ಥಳೀಯ ನಿವಾಸಿಗಳಾದ ನಿಶಾಂತ್ ಹಾಗು ಅಭಿಜಿತ್ ಬ್ಯಾನರ್‍ಗೆ ಹಾನಿ ಮಾಡಲು ಯತ್ನಿಸಿದ್ದರು. ಆ ವೇಳೆ ನಾವು ನೋಡಿದ್ದು, ಈ ವಿಚಾರವನ್ನು ಅರಿತ ಅಲ್ಲಿನ ಕೌನ್ಸಿಲರ್ ವಿಶ್ವನಾಥರವರು ನಾನು ಮಾತನಾಡಿ ಸರಿ ಮಾಡಿದೆ ಎಂದು ಹೇಳಿದ್ದರು. ಅವರು ಬ್ಯಾನರಿಗೆ ಹಾನಿ ಮಾಡಿದ್ದನ್ನು ನಾವು ನೋಡಿದ್ದೇವೆಂದು ಆರೋಪಿಸಿ ಇದೀಗ ತಂಡ ನನಗೆ ಹಲ್ಲೆ ನಡೆಸಿದೆ ಎಂದು ಹನೀಫ್ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಬೆಟ್ಟು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಬನ್ನೂರು ಜೈನರಗುರಿ ಅಂಕಿತ ನಿಲಯದ ಅಭಿಜಿತ್(18) ಹಾಗೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ, ಬನ್ನೂರು ಜೈನಗುರಿ ಕೃಷ್ಣ ನಿಲಯದ ಯತೀಂದ್ರ(18), ಬನ್ನೂರು ಜೈನಗುರಿಯ ಆನಂದ ನಿಲಯದ ನಿಶಾಂತ್(17) ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಕಾಲೇಜು ಬಿಟ್ಟು ಸರ್ಕಸ್‍ಗೆಂದು ನಾನು ಯತೀಂದ್ರ ಹಾಗು ನಿಶಾಂತ್ ಬರುತ್ತಿದ್ದ ವೇಳೆ ಹನೀಫ್ ಹಾಗೂ ಆತನೊಂದಿಗಿದ್ದ ಹಲವಾರು ವಿದ್ಯಾರ್ಥಿಗಳು, ಓರ್ವ ರಿಕ್ಷಾ ಚಾಲಕ ನನಗೆ ಹಲ್ಲೆ ನಡೆಸಲು ಬಂದರು. ಈ ವೇಳೆ ನನ್ನೊಂದಿಗಿದ್ದ ಸ್ನೇಹಿತರಿಬ್ಬರು ತಡೆಯಲು ಬಂದಾಗ ತಂಡ ಅವರ ಮೇಲೂ ಹಲ್ಲೆ ನಡೆಸಿದೆ ಎಂದು ಅಭಿಜಿತ್ ತಿಳಿಸಿದ್ದಾರೆ.
