ಸುದ್ದಿ9 ಬಜ್ಪೆ: ಪೊಪ್ಯುಲ್ ಜಗದೀಶ ಸಿ. ಶೆಟ್ಟಿ ಎಜುಕೇಶನ್ ಸೆಂಟರ್ ಇದರ ವಿಸ್ತೃತ ಕಟ್ಟಡ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದ ಉದ್ಘಾಟನಾ ಸಮಾರಂಭ ಜನವರಿ 3ರ ಶನಿವಾರ ಸಂಜೆ ಪೋಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಮಳವೂರು ಬಜ್ಪೆ ಇಲ್ಲಿ ನಡೆಯಲಿದೆ ಎಂದು ಶಾಲಾ ಟ್ರಸ್ಟಿಗಳಲೊಬ್ಬರಾದ ಗೋಪಿನಾಥ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬುಧವಾರ ಸಂಜೆ ಮರವೂರಿನ ಜಗದೀಶ್ ಸಿ, ಶೆಟ್ಟಿ ಫಾರ್ಮ್ರ್ಹೌಸಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಇಂಗ್ಲೀಷ್ ಮಾಧ್ಯಮ ಶಿಕ್ಷಣ ವಂಚಿತ ಮಕ್ಕಳಿಗೆ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಪೋಷಕರ ಮಕ್ಕಳಿಗೆ ಕೈಗೆಟಕುವ ಶುಲ್ಕದಲ್ಲಿ ಅತ್ಯಾಧುನಿಕ ವಿದ್ಯಾಭ್ಯಾಸ ನೀಡುವ ಸದುದ್ದೇಶದಿಂದ ಜಗದೀಶ ಸಿ. ಶೆಟ್ಟಿ 1988ರಲ್ಲಿ ಈ ಶಾಲೆಯನ್ನು ಸ್ಥಾಪಿಸಿದ್ದಾರೆ. ಆರಂಭದ ದಿನದಲ್ಲಿ 18 ವಿದ್ಯಾರ್ಥಿಗಳಿದ್ದು, ಇಂದಿಗೆ 910 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹಳ್ಳಿಗಳಿಗೆ ವಾಹನ ಸೌಲಭ್ಯ, ಶುದ್ಧ ಕುಡಿಯುವ ನೀರು, ಕಂಪ್ಯೂಟರ್ ಕ್ಲಾಸ್, ಸ್ಮಾರ್ಟ್ ಕ್ಲಾಸ್, ಕಟೀಲು ದೇಗುಲದ ವತಿಯಿಂದ ಬಿಸಿಯೂಟ ಎಲ್ಲಾ ಸೌಲಭ್ಯವಿದೆ. ಆದರೆ ಇತ್ತೀಚೆಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಕಟ್ಟಡ ಮತ್ತು ನೂತನ ಸಭಾಂಗಣದ ರಚನೆ, ವಿಶಾಲವಾದ ಆಟದ ಮೈದಾನ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಶನಿವಾರ ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಡೆಸಲಿದ್ದಾರೆ. ಅಂದು ಶಾಲೆಯ ಹಲವು ವಿದ್ಯಾಥರ್ಿಗಳಿಗೆ ವಿದ್ಯಾಥರ್ಿವೇತನ ನೀಡಲಿದೆ. ಈ ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು, ಹಲವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಗೋಪಿನಾಥ್ ತಿಳಿಸಿದ್ದಾರೆ.
ಶಾಲೆಯ ಕಾರ್ಯಾಧ್ಯಕ್ಷರಾದ ಜಗದೀಶ ಸಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿದರು. ಕಾಲೇಜಿನ ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಅರುಣ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ನಿವೃತ ಉಪನ್ಯಾಸಕ ಉಮೇಶ್ ರಾವ್, ಶಾಲಾ ಮುಖ್ಯ ಶಿಕ್ಷಕಿ ಸೈನಾ ಪಲ್ಲು ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು
1 bajpe 1

By suddi9

Leave a Reply

Your email address will not be published. Required fields are marked *