ಸುದಿ9ಬಂಟ್ವಾಳ: ಅಮ್ಟಾಡಿ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯು.ಭಾಸ್ಕರ್ ಅವರ ವಿಧಾಯ ಸಮಾರಂಭ ಸಂಘದ ಮುಖ್ಯ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನರಸಿಂಹ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಿರ್ದೇಶಕ ನವೀನ್ಚಂದ್ರ ಮಾತನಾಡಿ ನಿವೃತ್ತಿ ಹೊಂದಿದ ಬಾಸ್ಕರ್ ಅವರ ಪ್ರಮಾಣಿಕತೆ ಮತ್ತು ದಕ್ಷತೆ ಇತರರಿಗೆ ಮಾದರಿಯಾಗಿದೆ. ಅವರ ನಗುಮುಖಗದ ಸೇವೆ ಸಂಘದ ಅಭಿವೃದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಉಪಾಧ್ಯಕ್ಷ ಅನಿಲ್ ಪ್ರಾಂಕ್ ನಿರ್ದೇಶಕ, ಆಲ್ವಿನ್ ವಿನಯ ಲೊಬೋ, ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಧ್ಯಾ ಕುಮಾರಿ ಉಪಸ್ಥಿತರಿದ್ದರು. ನಿದೇರ್ಶಕ ರೋನಾಲ್ಡ್ ಡಿ.ಸೋಜ ಸ್ವಾಗತಿಸಿ, ನಿದೇರ್ಶಕ ಪೆಲಿಕ್ಸ್ ಪಿಂಟೋ ವಂದಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು
1 (3)

By suddi9

Leave a Reply

Your email address will not be published. Required fields are marked *