mbd_mar3_4 (3)

mbd_mar3_4 (1)

ಸುದ್ದಿ9 ಮೂಡುಬಿದರೆ: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯನ್ನು ತಿರುವುಗೊಳಿಸಲು ಕೈಗೊಂಡಿರುವ ಯೋಜನೆಯನ್ನು ವಿರೋಧಿಸಿ ಮಿಜಾರಿನ ನಾಗರಿಕಾ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮಿಜಾರು ಜಂಕ್ಷನ್ ಬಳಿ `ತುಳಸಿ ಜಲ’ವಿಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿ ಬಂದ್ಗೆ ಬೆಂಬಲವನ್ನು ಸೂಚಿಸಿದರು.

ಸಮಿತಿಯ ಕಾರ್ಯದ ಸುಧಾಕರ ಪೂಂಜಾ ಅವರು ಮಾಧ್ಯಮದ ಜತೆ ಮಾತನಾಡಿ ನೇತ್ರಾವತಿ ನದಿ ತಿರುವು, ಎತ್ತಿನಹೊಳೆ ಯೋಜನೆಯ ಮೂಲಕ ಕೃಷಿ ಭೂಮಿ, ಪಶ್ಚಿಮ ಘಟ್ಟ ಪ್ರದೇಶ ಮತ್ತು ನದಿ ನೀರನ್ನು ಬರಡುಗೊಳಿಸಲು ಬೆಂಬಲಿಸುವ ಭ್ರಷ್ಟರಿಗೆ ಮುಂದೆ ತಮ್ಮ ಅಂತಿಮ ಕಾಲದಲ್ಲಿ ಬಾಯಿಗೆ ಬಿಡಲು ನೀರು ಸಿಗಲು ಸಾಧ್ಯವಿಲ್ಲ ಆದ್ದರಿಂದ ನೇತ್ರಾವತಿ ನದಿಯಿಂದಲೇ 2 ಲೀಟರ್ ನೀರನ್ನು ತಂದು ನೀರನ್ನು `ತುಳಸಿ ಜಲ’ವಾಗಿ ಪರಿವತರ್ಿಸಿ ಗಡಿಗೆಗೆ ತುಳಸಿ ಮಾಲೆಯನ್ನು ಹಾಕಿ ಅದರ ಒಳಗೆ ತುಳಸಿ ದಳಗಳನ್ನು ಇಟ್ಟು ಕೊನೆಗಾಲಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಹೇಳಿದ ಅವರು ಬಂದ್ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ಸಮಿತಿಯ ಇನ್ನೊರ್ವ ಕಿಶೋರ್ ಶೆಟ್ಟಿ ಮಾತನಾಡಿ ನದಿ ತಿರುವಿನ ಮೂಲಕ ಜಿಲ್ಲೆಯ ನೀರನ್ನು ಬರಿದುಗೊಳಿಸಿ ಚಿಕ್ಕ ಬಳ್ಳಾಪುರಕ್ಕೆ ನೀರು ನೀಡುತ್ತಿರುವುದರ ಬಗ್ಗೆ ತಮ್ಮ ವಿರೋಧವಿದೆ. ಈ ಯೋಜನೆಯ ಬಗ್ಗೆ ದ.ಕ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೇ ಪ್ರತಿಭಟನೆ ನಡೆಸಿ ಭ್ರಷ್ಟರಿಗೆ ಪಾಠ ಕಲಿಸೋಣ ಎಂದು ಹೇಳಿದರು.

ಸಮಿತಿಯ ಸಂಚಾಲಕ ಸುದರ್ಶನ ಪೂಂಜಾ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *