ಬೆಂಗಳೂರು  : ಬೆಂಗಳೂರು ಚರ್ಚ್ ​ಸ್ಟ್ರೀಟ್​ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮಿ ಸಂಘಟನೆ ಹೆಸರು ಪ್ರಸ್ತಾಪಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. +

islam

ಈ ಬಗ್ಗೆ ಹೇಳಿಕೆ ಬೆಂಗಳೂರಿನಲ್ಲಿ ನೀಡಿರುವ ಮುಸ್ಲಿಂ ಫೆಡರೇಷನ್​ ಅಧ್ಯಕ್ಷ ಷರೀಫ್​ ಕೊಟ್ಟಾಪುರ, ಜನರಲ್ಲಿ ಸಿಮಿ ಅಂದರೆ ಮುಸ್ಲಿಂ ಎಂಬ ಭಾವನೆ ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ನಮ್ಮ ತಕರಾರಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕು, ಆದರೆ ಸಿಮಿ ಸಂಘಟನೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ. ಹಾಗಾಗಿ ತನಿಖಾ ಹಂತದಲ್ಲಿ ಸಿಮಿ ಸಂಘಟನೆ ಹೆಸರು ಹೇಳೋದು ಸರಿಯಲ್ಲ ಎಂದಿದ್ದಾರೆ.

ಈ ಮೊದಲು ಕೇಂದ್ರ ಗೃಹ ಸಹಾಯಕ ಸಚಿವ ಕಿರೆನ್​ ರಿಜು, ಬೆಂಗಳೂರು ಸ್ಫೋಟದಲ್ಲಿ ಸಿಮಿ ಉಗ್ರರ ಕೈವಾಡ ಎಂದಿದ್ದರು. ಆದರೆ ಇದಕ್ಕೆ ಫೆಡರೇಷನ್​ ಆಫ್ ಮುಸ್ಲಿಂ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಸಿಮಿ ಹೆಸರು ಪ್ರಸ್ತಾಪಿಸದಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಷರೀಫ್ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *