ಸುದ್ದಿ9ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋಸ್ತವಕ್ಕೆ ಪೊಳಲಿ ಸೀಮೆಯ ಭಕ್ತಾಧಿಗಳಿಂದ ಹೊರೆ ಕಾಣಿಕೆ ಡಿ28ರಂದು ಸಾಯಂಕಾಲ ಪೊಳಲಿ ದೇವಸ್ಥಾನದ ವಠಾರದಿಂದ ಬ್ಯಾಂಡ್ ವಾದ್ಯ ಗೋಷ್ಟಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಹೊರೆಕಾಣಿಕೆಯನ್ನು ಸಮರ್ಪಸಲಾಯಿತು.
ಕೋಡಿಮಜಲು ಬ್ರಹ್ಮ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತ್ರತ್ವದಲ್ಲಿ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಿ ಚಾಲನೆ ನೀಡಲಾಯಿತು.
ಉಗ್ರಾಣ ಮುಹೂರ್ತವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ನೆರವೇರಿಸಿದರು . ರಾಮಕ್ರ್ಷಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಉಧ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ , ಕೆ ರಾಮ ಭಟ್, ವಾಸುದೇವ ಮಯ್ಯ, ಪಿಎನ್ ವಿಷ್ಣು ಮೂರ್ತಿ, ಮಾದವ ಭಟ್ , ನಾರಾಯಣ ಭಟ್, ವೇಂಕಟೇಶ್ ನಾವಡ, ಸುಬ್ರಾಯ ಕಾರಂತ,ಬಾಬು ಮೇಸ್ತ್ರಿ ಕೇಶವ ಪೊಳಲಿ ,ಬಾಬು , ರವಿಶಂಕರ ನೂಯಿ ಮತ್ತಿತರರು ಉಪಸ್ಥಿತರಿದ್ದರು.
















