ಸುದ್ದಿ9 ಮೂಡುಬಿದರೆ: ಡಿ.21ರಿಂದ 25ರವರೆಗೆ ಜಾರ್ಖಂಡ್ ರಾಜ್ಯದ ಜಮ್ಸಡ್ಪುರದಲ್ಲಿ ಜರುಗಿದ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಉಷಾ ಬಿ.ಎನ್. ಮತ್ತು ಮೆರಿನಾದೇವಿ ಚಿನ್ನದ ಪದಕ ಪಡೆದಿದ್ದಾರೆ.
ಮೆರಿನಾದೇವಿ 57ಕೆ.ಜಿ. ದೇಹ ತೂಕದಲ್ಲಿ ಸ್ಪರ್ಧಿಸಿದರೆ, ಉಷಾ ಬಿ.ಯನ್. 72ಕೆ.ಜಿ. ದೇಹ ತೂಕದಲ್ಲಿ ಸ್ಪರ್ಧಿಸಿದ್ದಾರೆ. ರಾಷ್ಟ್ರೀಯ ತರಬೇತುದಾರರಾಗಿರುವ ಪ್ರಮೋದ್ ಕುಮಾರ್ ಶೆಟ್ಟಿ ನೆಲ್ಯಾಡಿ ಇವರಿಂದ ತರಬೇತಿ ಪಡೆದಿದ್ದಾರೆ. ಭಾರತ ತಂಡದ ವ್ಯವಸ್ಥಾಪಕರಾಗಿ ಇಂಡಿಯನ್ ಪವರ್ ಲಿಫ್ಟಿಂಗ್ ಅಸೋಶಿಯೇಶನ್ ಉಪಾಧ್ಯಕ್ಷ ಸತೀಶ್ಕುಮಾರ್ ಕುದ್ರೋಳಿ ಸಹಕರಿಸಿದ್ದರು.


