ಬಂಟ್ವಾಳ: ಬಂಟ್ವಾಳ ಬಿಜೆಪಿಯ ಸಂಗಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಭಾರತರತ್ನ ಪ್ರಶಸ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ 90ನೇ ಜನ್ಮದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
2
ಬಿಜೆಪಿ ಪ್ರಮುಖ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶದ ಮಹಾನ್ ನಾಯಕರಲ್ಲಿ ಓರ್ವರಾಗಿದ್ದು ಅಜಾತಶತ್ರು ಎನಿಸಿಕೊಂಡಿದ್ದಾರೆ. ಭಾರತರತ್ನ ಪ್ರಶಸ್ತಿ ದೇಶಕ್ಕೆ ಸಂದ ಗೌರವ ಎಂದು ಹೇಳಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ್ ಶೆಟ್ಟಿ , ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ , ತಾ.ಪಂ.ಸದಸ್ಯೆ ರೇವತಿ ಆರ್. ಪೂಜಾರಿ, ಬಿಜೆಪಿ ಪ್ರಮುಖರಾದ ರತ್ನಕುಮಾರ್ ಚೌಟ, ಸಂಗಬೆಟ್ಟು ಶಕ್ತಿ ಕೇಂದ್ರದ ಸಂಚಾಲಕ ಹರೀಶ್ ಆಚಾರ್ಯ, ಸತೀಶ್ ಪೂಜಾರಿ, ಸಂದೇಶ ಶೆಟ್ಟಿ , ಮಾಧವ ಶೆಟ್ಟಿಗಾರ್, ರಾಘವ ಅಮೀನ್, ಸಂತೋಷ್ ಕುಮಾರ್ ಬೆಟ್ಟು , ಭಾರತಿ ಚೌಟ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *