ಸುದ್ದಿ9ಕೈಕಂಬ:ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ-ಬ್ರಹ್ಮಕಲಶವು ಜನವರಿ 2ರಂದು ಶುಕ್ರವಾರ ವೇದಮೂರ್ತಿ ಜ್ಯೋತಿಷ್ಯ ವಿದ್ವಾನ್ ಕೋಡಿಮಜಲು ಬ್ರಹ್ಮಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ಜರಗಲಿದೆ.
ಬ್ರಹ್ಮ ಕಲಶ ಪ್ರಯುಕ್ತ ಡಿ. 28 ರಂದು ಮೊದಲ್ಗೊಂಡು ಜ.2ರವರೆಗೆ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವದ ಕಾರ್ಯಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಅವರು ತಿಳಿಸಿದ್ದಾರೆ.
ಬ್ರಹ್ಮಕಲಶೋತ್ಸವದ ಗೌರವಧ್ಯಕ್ಷ ಅರಣ್ಯ ಸಚಿವ ಬಿ. ರಮಾನಾಥ ರೈ, ಅಧ್ಯಕ್ಷ ರಾಜೇಶ್ ನಾಕ್ ಉಳಿಪಾಡಿಗುತ್ತು, ಆಡಳಿತ ಮಂಡಳಿ ಕಾರ್ಯದರ್ಶಿ ಕೆ. ರಾಮ ಭಟ್,ಅರ್ಚಕ ವಾಸುದೇವ ಮಯ್ಯ, ಉಪಕಾರ್ಯದರ್ಶಿ ವೆಂಕಟೇಶ್ ನಾವಡ, ಪಿಎನ್, ವಿಷ್ಣುಮೂರ್ತಿ, ರವಿಶಂಕರ ನೂಯಿ, ಮತ್ತಿತರರು ಉಪಸ್ಥಿತರಿರುವರು.
ಡಿ.28ರಂದು ಸಾಯಂಕಾಲ 5ಗಂಟೆಗೆ ಸಾಮೂಹಿಕ ಪ್ರಾರ್ಥನೆ. 5.10ಕ್ಕೆ ಪೊಳಲಿ ಶ್ರೀ ರಾಮಕೃಷ್ಣ ತಪೊವನದ ವಿವೇಕಚೈತನ್ಯಾನಂದ ಅವರು ದೀಪಬೇಳಗಿಸಿ ಉದ್ಘಾಟಿಸಲಿದ್ದು ಉಗ್ರಾಣಮೂಹೂರ್ತವನ್ನು ರಾಜೇಶ್ ನಾಕ್ ಮಾಡಲಿದ್ದಾರೆ . ಊರ ಭಕ್ತಾಬಿಮಾನಿಗಳಿಂದ ಹೊರೆ ಕಾಣಿಕೆ ಬರಲಿದ್ದು. ಸಾಯಂಕಲ 6ಗಂಟೆಯಿಂದ ಆಲಯ ಪರಿಗ್ರಹ,ದೇವತಾ ಪ್ರರ್ಥನೆ,ತೋರಣಮೂಹೂರ್ತ, ಪ್ರಸಾದ ಶುದ್ಧಿ ರಕ್ಷೊಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ ಇತ್ಯಾದಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ.













