ಸುದ್ದಿ9ಬಂಟ್ವಾಳ : ಪುದು ಗ್ರಾಮದ ಮಜಪೆ ಮನೆಯ ಆನಂದ ಮಡಿವಾಳರವರ ಪುತ್ರಿ ಕುಮಾರಿ ಕೃಷಾ ರವರಿಗೆ ಆಕಸ್ಮಿಕವಾಗಿ ತೆಂಗಿನಕಾಯಿ ತಲೆಗೆ ಬಿದ್ದು ಅನಾಹುತಕ್ಕೀಡಾಗಿದ್ದು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ರೂ.50,000 ಮೊತ್ತದ ಚೆಕ್ಕನ್ನು ಅರಣ್ಯ , ಪರಿಸರ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಮ್ಮ ಕಛೇರಿಯಲ್ಲಿ ತಾಯಿ ಭಾರತಿಯವರಿಗೆ ಹಸ್ತಾಂತರಿಸಿದರು . ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ , ಭೂಬ್ಯಾಂಕ್ ನ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ , ಪುದು ಗ್ರಾಮ ಪಂ.ಸದಸ್ಯ ದುರ್ಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

