ಗುರುಪುರ : ಕೆಎಂಜೆ, ಎಸ್ವೈಎಸ್ ಮತ್ತು ಎಸ್ಎಸ್ಎಫ್ ಗುರುಪುರ ಕೈಕಂಬ ವತಿಯಿಂದ ನ. ೨೭ರಂದು ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ `ತಝ್ಕಿಯತ್ ಕ್ಯಾಂಪ್-ಆತ್ಮಶುದ್ಧಿಯ ಚಿಂತನೆ’ ಕಾರ್ಯಕ್ರಮ ನಡೆಯಿತು.

ಮರ್ಕಝ್ ಕೈಕಂಬದ ಪ್ರಾಂಶುಪಾಲ ಬದ್ರುದ್ದೀನ್ ಅಝ್ಹರಿ ಪ್ರಾರ್ಥನೆಗೈದು ಕ್ಯಾಂಪ್ಗೆ ಚಾಲನೆ ನೀಡಿದರು. ಖ್ಯಾತ ವಿದ್ವಾಂಸ ಜಿ. ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಮಾತನಾಡಿ, ಮಾನವ ಕುಲದಲ್ಲಿ ಪರಸ್ಪರ ಪ್ರೀತಿ, ತಾಳ್ಮೆ ಹಾಗೂ ಸೌಹಾರ್ದತೆ ಇರಬೇಕು. ಜೀವನದಲ್ಲಿ ಎಂತಹದ್ದೇ ಸಮಸ್ಯೆ ಎದುರಾದರೂ ಕೋಪಗೊಳ್ಳದೆ ತಾಳ್ಮೆ ಹಾಗೂ ವಿವೇಚನೆಯಿಂದ ಮುನ್ನಡೆದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಸಮಾರAಭದಲ್ಲಿ ಸಂಘಟನೆಗಳ ಪ್ರಮುಖರಾದ ಜಾಫರ್ ಸಾದಿಕ್ ಸಖಾಫಿ, ಶೇಖ್ ಮುಹಮ್ಮದ್, ಅಬ್ದುಲ್ಲ ಮೇಘ, ನಜೀಬ್ ಸಲಿನ, ನೌಫಲ್ ಪರೀದ್ನಗರ, ಸಿತಾರ್ ಮೊಹಮ್ಮದ್ ಹಾಜಿ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಹಸನ್ ಮದನಿ, ಇಸ್ಮಾಯಿಲ್ ಬಶೀರ್ ಐಡಿಯಲ್, ಅಬ್ದುಲ್ ರಜಾಕ್ ಹಾಜಿ ಮರ್ಕಝ್, ಎಟಿಬಿ ಅಹ್ಮದ್ ಹಾಜಿ, ರಿಯಾಝ್ ವಾಮಂಜೂರು, ಅಬೂಬಕ್ಕರ್ ಉಳಾಯಿಬೆಟ್ಟು, ರಶೀದ್ ಹಾಜಿ ಉಳಾಯಿಬೆಟ್ಟು, ಅಬ್ದುಲ್ ರಹಿಮಾನ್ ಕೋಯಾ ಉಸ್ತಾದ್, ಝೈನ್ ಅಡ್ಡೂರು, ಶರೀಫ್ ಅಡ್ಡೂರು, ಕೆ. ಪಿ ರಹೀಂ, ಮನ್ಸೂರ್ ಸಹಿತ ಹಲವರು ಉಪಸ್ಥಿತರಿದ್ದರು.
