ಬಂಟ್ವಾಳ: ಮಕ್ಕಳ ದಿನಾಚರಣೆಯ ಪ್ರಯುಕ್ತಸಿದ್ದಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಪಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಎಲ್ಲಾ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.


ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಬಹುಮಾನ ವಿತರಿಸಿ ಮಾತನಾಡಿ ಅಂಗನವಾಡಿಯ ಪುಟಾಣಿಗಳು ದೇವರಿಗೆ ಸಮಾನ ಈ ಸಮಯದಲ್ಲಿ ಪೋಷಕರು ಮಕ್ಕಳನ್ನು  ಪ್ರೀತಿ ವಾತ್ಸಲ್ಯದಿಂದ ಕಂಡಾಗ ಹೆತ್ತವರೊಂದಿಗೆ ಮಕ್ಕಳು ನಿರಂತರವಾಗಿ ಪ್ರೇಮದಿಂದ ಇರಲು ಸಾಧ್ಯ ಎಂದರು.

ಸಿದ್ದಕಟ್ಟೆಯ ಉದ್ಯಮಿ ರೋ.ನೋಣಯ ಶೆಟ್ಟಿಗಾರ್ ಶುಭ ಹಾರೈಸಿದರು‌. ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಸದಸ್ಯ  ಸಚ್ಚಿದಾನಂದ ಭಟ್ ಕೊಡುಗೆಯಾಗಿ ನೀಡಿದ ಪ್ರೊಟೀನ್ ಕಿಟ್  ಅಂಗನವಾಡಿ ಕಾರ್ಯಕರ್ತೆ ಸರಸ್ವತಿಯವರಿಗೆ ಹಸ್ತಾಂತರಿಸಿದರು.
ಸ್ಥಳೀಯರಾದ ಅಶೋಕ್ ಆಚಾರ್ಯ, ಅಂಗನವಾಡಿ ಸಹಾಯಕಿ ಶಾರದಾ, ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

By Suddi9