ಬಂಟ್ವಾಳ : ನವೋದಯ ಮಿತ್ರ ಕಲಾವೃಂದ (ರಿ.) ಹಾಗೂ ನೇತ್ರಾವತಿ ಮಾತೃ ಮಂಡಳಿ, ನೆತ್ತರಕೆರೆ ಇದರ 40ನೇ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.

ವಾರ್ಷಿಕೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದಿನೇಶ್ ಬೆರ್ವ ಹಾಗೂ ಕಾರ್ಯದರ್ಶಿ ಶ್ರೀಧರ ಹೆಚ್ ಅವರನ್ನು ಆಯ್ಕೆಗೊಳಿಸಲಾಯಿತು.
ಕೋಶಾಧಿಕಾರಿಯಾಗಿ ಶಶಾಂಕ್ ಎನ್. ಉಪಾಧ್ಯಕ್ಷರಾಗಿ ಸವಿತ್ ಎನ್., ಸುನೀತಾ ಬೆರ್ವ, ಜತೆ ಕಾರ್ಯದರ್ಶಿಯಾಗಿ ಕುಮಾರಿ ವರ್ಷ,ಕ್ರೀಡಾ ಕಾರ್ಯದರ್ಶಿಗಳಾಗಿ ಧನ್ಯರಾಜ್, ಕುಮಾರಿ ಜನನಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
