ಬಂಟ್ವಾಳ : ಹೊಕ್ಕಾಡಿಗೋಳಿ ಮಹಿಷ ಮರ್ಧಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ವತಿಯಿಂದ ಸಮಿತಿ ಗೌರವ ಸಲಹೆಗಾರರಾಗಿದ್ದು, ಇತ್ತೀಚೆಗೆ ನಿಧನರಾದ ಕಂಬಳ ಕೋಣಗಳ ಯಜಮಾನರಾದ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಸಮೀಪದ ಹೊಂಗಾರಹಿತ್ಲು ನಿವಾಸಿ ಕಾಂತಣ್ಣ ಶೆಟ್ಟಿ ಹೊಂಗಾರ ಹಿತ್ಲು ಅವರಿಗೆ ನುಡಿ ನಮನ ಕಾರ್ಯಕ್ರಮ ಹೊಕ್ಕಾಡಿಗೋಳಿ ಕಂಬಳ ಗದ್ದೆಯಲ್ಲಿ ನಡೆಯಿತು.

ಹೊಕ್ಕಾಡಿಗೋಳಿ ಮಹಿಷ ಮರ್ಧಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿ, ಕಂಬಳ ಕ್ಷೇತ್ರದಲ್ಲಿ ಸುದೀರ್ಘ ವರ್ಷದಲ್ಲಿ ತೊಡಗಿಸಿಕೊಂಡು ಕಂಬಳ ಕೋಣಗಳ ಯಜಮಾನರಾಗಿ, ಕಂಬಳ ಪ್ರೋತ್ಸಾಹಕರಾಗಿ ಅಪಾರ ಅನುಭವ ಹೊಂದಿದ್ದ ಹಿರಿಯರಾದ ಕಾಂತಣ್ಣ ಶೆಟ್ಟಿ ಹೊಂಗಾರ ಹಿತ್ಲು ಅವರ ನಿಧನ ನಮ್ಮ ಸಮಿತಿಗೆ ಹಾಗೂ ಕಂಬಳ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪದಾಽಕಾರಿಗಳಾದ ಪ್ರಭಾಕರ ಹುಲಿಮೇರು, ರಾಜೇಶ್ ಜಿ.ಶೆಟ್ಟಿ, ಪುಷ್ಪರಾಜ ಜೈನ್, ಸತೀಶ್ ಮಠ, ಸಂತೋಷ್ ಶೆಟ್ಟಿ ಕೊನೆರೊಟ್ಟು, ಸುರೇಂದ್ರ ಪೂಜಾರಿ ಸ್ಥಳದಾನಿಗಳಾದ ಸುಽರ್ ಶೆಟ್ಟಿ, ರಾಜು ಶೆಟ್ಟಿ, ಪುಷ್ಪರಾಜ ಶೆಟ್ಟಿ, ಪ್ರವೀಣ್ ಮೂಲ್ಯ, ರಮೇಶ್ ಮೂಲ್ಯ, ಸುಂದರ ಪೂಜಾರಿ, ಭುಜಂಗ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.
