ಬಂಟ್ವಾಳ : ಬೊಲ್ಪು ರೈತ ಉತ್ಪಾದಕ ಸಂಸ್ಥೆ ಬಿ.ಸಿ. ರೋಡ್ ಇದರ ಆಶ್ರಯದಲ್ಲಿ  ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು. 

ಸಾವಯವ ಕೃಷಿ ಸಾಧಕ  ಕಾಂಪ್ರಬೈಲ್ ಆನಂದ  ಶೆಟ್ಟಿ ರಶ್ಮಿ ದಂಪತಿ ಮತ್ತು ಕೃಷಿ ಪೋಷಕ ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಎಚ್. ನಾರಾಯಣ ಭಟ್, ಕಾರ್ಯದರ್ಶಿ ನಾಗೇಶ್ ಕುಲಾಲ್ ಹಾಗೂ ವಾಮದಪದವು ಹಾಲು  ಉತ್ಪಾದಕರ ಸಂಘದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಅವರನ್ನು ಗುರುತಿಸಿ ಗೌರವಿಸಲಾಯಿತು.

ಬೊಲ್ಪು ಎಫ್ ಪಿಒ  ಆಡಳಿತ ನಿರ್ದೇಶಕ ರಾಜಾ ಬಂಟ್ವಾಳ್, ಸುದ್ದಿ ಸಮೂಹ ಸಂಸ್ಥೆಯ  ಡಾ| ಯು.ಪಿ. ಶಿವಾನಂದ ಸಭೆ ಉದ್ದೇಶಿಸಿ ಮಾತನಾಡಿದರು. 

ಸಂಸ್ಥೆಯ ನಿರ್ದೇಶಕರಾದ ಜಗನ್ನಾಥ ಚೌಟ, ಸದಾನಂದ ಡಿ. ಶೆಟ್ಟಿ, ದೇವಪ್ಪ ಕುಲಾಲ್, ಸೀತಾರಾಮ ಶೆಟ್ಟಿ, ಕೃಷ್ಣಪ್ಪ ಸಪಲ್ಯ, ವಿಜಯ ರೈ, ಜಗದೀಶ ಭಂಡಾರಿ, ಅರ್ವಿನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಸಿಇಒ ಹರ್ಷಿತ್ ಕುಮಾರ್ ,ಕೃಷಿ ತಾಂತ್ರಿಕ ಅಧಿಕಾರಿ ಸ್ನೇಹ ಮಾಹಿತಿ ನೀಡಿದರು.

By Suddi9