ಪೊಳಲಿ:  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ಇತ್ತಿಚೇಗೆ ಜರಗಿತು.  ಸಮಾರಂಭದ ಉದ್ಘಾಟನೆಯನ್ನು ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು.   

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಾದ ಕೆಪಿ ಚಂದ್ರಮೋಹನ ಅವರು ಮಾತನಾಡಿ ಇದು ನಮ್ಮ ಗ್ರಾಮೀಣ ಪ್ರದೇಶದ ಸಂಗೀತ ಮತ್ತು ಭರತನಾಟ್ಯ ಆಸಕ್ತರಿಗೆ ಒಳ್ಳೆಯ ಸುವರ್ಣ ಅವಕಾಶ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು. ಸಂಗೀತ ಗುರುಗಳಾದ ವಿದ್ವಾನ್ ಶ್ರೀ ಅಮಿತ್ ಕುಮಾರ್ ಬೆಂಗ್ರೆ ಅವರು ಮಾತನಾಡಿ “ಇಂದಿನ ಒತ್ತಡದ ಜೀವನದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಸಾಧನೆ ಕೇವಲ ವೇದಿಕೆಯ ಮೆರುಗಿಗಾಗಿ ಅಲ್ಲ, ಅದು ಪ್ರತಿಯೊಬ್ಬರ ಮನೆಯ ವಾತಾವರಣವನ್ನು ಪವಿತ್ರ ಹಾಗೂ ಧನಾತ್ಮಕಗೊಳಿಸುವ ಮಾಧ್ಯಮ. ಪ್ರತಿಯೊಂದು ಮನೆಯಲ್ಲೂ ಸಂಗೀತದ ಶಿಕ್ಷಣ ಮತ್ತು ಅಭ್ಯಾಸ ನಡೆಯುವಂತಾಗಬೇಕು,” ಎಂದು ಹೇಳಿದರು.

ಭರತನಾಟ್ಯ ಗುರುಗಳಾದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಮಾತನಾಡಿ  ಇದು ತಾಯಿ ರಾಜರಾಜೇಶ್ವರಿ ನನಗೆ ಕರುಣಿಸಿದ ಪ್ರಸಾದ . ಇಂತಹ ಪುಣ್ಯ ಕ್ಷೇತ್ರದಲ್ಲಿ ಭರತನಾಟ್ಯ ಕಲಿಸುವುದು ನನ್ನ ಯೋಗವೇ ಸರಿ ಎಂದು ಭಾವುಕರಾಗಿ ನುಡಿದರು.  ಶ್ರೀ ಕ್ಷೇತ್ರದ ತಾಯಿ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಪ್ರಾರ್ಥಿಸಿ ದೇವಳದ ಪ್ರಧಾನ ಅರ್ಚಕರಾದ ಪರಮೇಶ್ವರ ಭಟ್‌ ಪ್ರಸಾದ ನೀಡಿದರು. 

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ   ವೆಂಕಟೇಶ ನಾವಡ ಪೊಳಲಿ,  ಚಂದ್ರಶೇಖರ್ ಭಂಡಾರಿ ಅಮ್ಮುಂಜೆ, ಸುಕೇಶ್ ಚೌಟ, ಮುಂತಾದವರು ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ನಿರೂಪಿಸಿದರು ಕಿಶೋರ್‌ ಪಲ್ಲಿಪಾಡಿ  ಸ್ವಾಗತಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *