ಬಂಟ್ಚಾಳ: ಮಂಗಳೂರಿನ ಮಂಗಳ ಈಜು ಕೊಳದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)  ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಫರ್ಧೆ ಯ  ಹುಡುಗಿಯರ ವಿಭಾಗದಲ್ಲಿ ಕಲ್ಕಡ್ಕ  ಶ್ರೀರಾಮ ಪಿಯು ಕಾಲೇಜಿನ ಪ್ರಥಮ ಪಿಯುಸಿ   ವಿದ್ಯಾರ್ಥಿನಿ ಅನರ್ಘ್ಯ ಎ ಆರ್   200 ಮೀಟರ್ ಇಂಡಿಯುಜುವಲ್ ಪದಕ  , 200 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ 400 ಮೀ ಫ್ರೀಸ್ಟೈಲ್ ನಲ್ಲಿ  3 ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.. 


ಈಕೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್  ಬಿ.ಕೆ ನಾಯ್ಕ್ , ಅಶೋಕ್ ದೇವಾಡಿಗ ಮತ್ತು ಉಮೇಶ್ ವಿಟ್ಲ ಇವರ ಶಿಷ್ಯೆಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ ಮತ್ತು ತರಬೇತುದಾರರಾದ   ಸಂಜಯ್ ಮತ್ತು ಗಗನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.
ಅಶೋಕ್ ಕುಮಾರ್ ಬರಿಮಾರು ಮತ್ತು ರೋಹಿಣಿ. ಬಿ ಯವರ ಪುತ್ರಿಯಾಗಿದ್ದಾಳೆ

By Suddi9

Leave a Reply

Your email address will not be published. Required fields are marked *