ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮೂರು ದಿನಗಳ ಪ್ರೇರಣಾ ಬಾಲಿಕಾ ಶಿಬಿರವು  ನಡೆಯಿತು.  ವಿವೇಕಾನಂದ ಮಹಾವಿದ್ಯಾಲಯದ  ಸ್ನಾತಕೋತ್ತರ ವಿಭಾಗದ ಡೀನ್  ಡಾ. ವಿಜಯ ಸರಸ್ವತಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಪ್ರೇರಣೆಯ ಮೂಲಕ ನಿವಾರಿಸಬಹುದು ಎಂದರು.
 
 
ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ ಪ್ರಭಾಕರ್ ಭಟ್ ಕಲ್ಲಡ್ಕ, ಸುಷ್ಮಾ ಪ್ರಭಾಕರ್, ಸಂಚಾಲಕರಾದ  ವಸಂತ ಮಾಧವ , ಕಮಲ ಪ್ರಭಾಕರ್ ಭಟ್,  ಲಕ್ಷ್ಮೀರಘುರಾಜ್,  ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ರವಿರಾಜ್ ಕಣಂತೂರು,  ಗೋಪಾಲ ಎಂ, ತಿರುಮಲೇಶ್ವರ ಪ್ರಶಾಂತ್, ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 
 
 
 ಶಿಬಿರದಲ್ಲಿ ಬೌದ್ಧಿಕ ಅವಧಿ, ಕಾರ್ಯಶಾಲಾ ಅವಧಿ, ಚರ್ಚಾ ಅವಧಿ, ಕಥಾ ಅವಧಿ, ಇದರ ಜೊತೆಗೆ ಶಾರೀರಿಕ ಅವಧಿ, ಭಜನಾ ಅವಧಿ, ಅನೌಪಚಾರಿಕ ಅವಧಿ ಸೇರಿದಂತೆ ಒಟ್ಟು ೨೧ ಅವಧಿಗಳು ನಡೆಯಿತು. ಮುಖ್ಯವಾಗಿ  ಬಾಲ ಗೋಕುಲದ ಪ್ರಾತ್ಯಕ್ಷಿಕೆಯು ಗಮನಸೆಳೆಯಿತು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸೀರೆಗೆ ಕುಚ್ಚು ಹಾಕುವುದು, ರಂಗೋಲಿ ಹಾಕುವುದು, ಹೂ ಕಟ್ಟುವ ವಿಧಾನ, ವೀರನಾರಿಯರ ಕಥೆ, ತಿಳಿಸಿ ಕೊಡಲಾಯಿತು. 
 
ಮೂರು ದಿನದ ಶಿಬಿರದಲ್ಲಿ ವಿದ್ಯಾರ್ಥಿನಿಯರಿಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಯೋಗಾಸನವನ್ನು  ಕುಸುಮ ನಡೆಸಿಕೊಟ್ಟರು, ಭಜನಾ ಅವಧಿಯನ್ನು ವಸುಧಾ ಜಿ ಎನ್, ಲಿಖಿತಾ ಜಿ ಎನ್ ನಡೆಸಿಕೊಟ್ಟರು. ಸೀತಾರಾಮ ಭಟ್ ಪೆರಾಜೆ, ಶ್ರೀಮತಿ ಸುರೇಖಾ, ಸುಷ್ಮಾ ಕುಡುಪ, ಶ್ರೀಮತಿ ಸುಜಾತ, ಸರಿತಾ ಪೈ, ಗಾಯತ್ರಿ ಭಟ್, ಶಾಂತಿ ಕುಡುಪ, ಡಾ ಅನುಸೂಯ, ವಿದ್ಯಶ್ರೀ ಎಸ್, ವೆಂಕಟರಮಣರಾವ್ ಮಂಕುಡೆ, ಲತಾ ಶ್ರೀನಿವಾಸ್, ಸೂರ್ಯನಾರಾಯಣ ಭಟ್ ಕಶೆಕೋಡಿ,  ಸುರೇಶ್ ಪರ್ಕಳ,  ಪುಷ್ಪಾವತಿ ಬಲ್ಲಾಳ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಿಬಿರವನ್ನು ನಡೆಸಿಕೊಟ್ಟರು. ಸಮಾರೋಪದಲ್ಲಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.  
ಒಟ್ಟು ೧೬೧ ವಿದ್ಯಾರ್ಥಿನಿಯರು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *