ಬಂಟ್ವಾಳ:ಇಲ್ಲಿನ   ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಡಿ. ಮಂಚಿ
ವಹಿಸಿ ಮಾತನಾಡಿ, ಸತ್ಯ, ಅಹಿಂಸೆ, ಧರಣಿ, ಅನ್ನ ಸತ್ಯಾಗ್ರಹ, ಸ್ವದೇಶಿ ಚಳವಳಿ, ಸಹೋದರತೆ, ಸಮಾನತೆ, ಸರಳತೆ,ಜಾತ್ಯತೀತತೆ, ಮುಂತಾದ ತತ್ವಗಳ ಕಲ್ಪನೆಯನ್ನು ಜಗತ್ತಿಗೆ ನೀಡಿದ ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ ಸಂಗ್ರಾಮದ ಮುಂಚೂಣಿ ನಾಯಕರಾಗಿದ್ದರು ಎಂದರು.
ಇಂದಿನ ಗೊಂದಲಮಯ, ಅಶಾಂತಿಯ, ಭಾರತ ಹಾಗೂ ಜಗತ್ತಿಗೆ ಗಾಂಧಿ ತತ್ವಗಳು, ಬೋಧನೆಗಳು, ಚಿಂತನೆಗಳು ಅಗತ್ಯವಿದೆ ಎಂದು ಅವರು ಹೇಳಿದರು.
 ವಾಣಿಜ್ಯ ವಿಭಾಗದ ಮುಖ್ಯಸ್ತರಾದ  ಅಖಿಲ ಪೈ, ಸ್ವಾಗತಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಕೆ.ಶಿವಣ್ಣ ಪ್ರಭು ವಂದಿಸಿದರು. ಡಾ. ಕಾಶಿನಾಥ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು, ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *