ಬಂಟ್ವಾಳ : ಕಳೆದ ಶನಿವಾರ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಸಮಾಜ ಸೇವಕ, ಶಿಕ್ಷಕ ಕೆ.ಎಂ. ಇಕ್ಬಾಲ್ ಮಾಸ್ತರ್ (48) ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಾಥರ್ಿವ ಶರೀರವನ್ನು ಕೆಳಗಿನಪೇಟೆ ಜುಮಾ ಮಸೀದಿ, ಸಜೀಪ ಲಕ್ಷ್ಮಣಕಟ್ಟೆ ಮಸೀದಿ ಬಳಿ ಸಾರ್ವಜನಿಕ ದರ್ಶನ ಇಡಲಾಗಿದ್ದು, ಬಳಿಕ ನಾಟೆಕಲ್ಲು, ಮದನಿ ನಗರ ಜುಮ್ಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

20btl-Iqbal

ಬಂಟ್ವಾಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಜೀಪಮೂಡ ವಲಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯದಲ್ಲಿದ್ದ ಕೆ.ಎಂ. ಇಕ್ಬಾಲ್ ಅವರು ಕಚೇರಿ ಕಾರ್ಯನಿಮಿತ್ತ ಡಿ.13ರಂದು ತಮ್ಮ ಆಕ್ಟಿವಾದಲ್ಲಿ ಬರುತ್ತಿದ್ದ ವೇಳೆ ಪಾಣೆಮಂಗಳೂರು ನೇತ್ರಾವತಿ ಹಳೆಯ ಸೇತುವೆ ಬಳಿ ಎದುರಿನಿಂದ ಬಂದ ಕಾರು ಇವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದು, ರಸ್ತೆಗೆಸೆಯಲ್ಪಟ್ಟ ಇಕ್ಬಾಲ್ ಮಾಸ್ತರ್ ಗಂಭೀರ ಗಾಯಗೊಂಡಿದ್ದರು. ತಲೆಗೆ ತೀವ್ರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಏಳು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಕ್ರಿಯಾಶೀಲ ಮಾಸ್ತರ್..
ಸಾಮಾಜಿಕ, ಧಾಮರ್ಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಮೌನ ಕ್ರಾಂತಿ ನಡೆಸುತ್ತಿದ್ದ ಇಕ್ಬಾಲ್ ಮಾಸ್ಟರ್ ರು ಪ್ರಯೋಗಶೀಲ ಶಿಕ್ಷಕರಾಗಿ ಗುರುತಿಸಿಕೊಂಡವರು. ಎಲ್ಲರ ಜೊತೆ ನಗುಮುಖದಿಂದಲೇ ಮಾತನಾಡುವ ಇವರು ಉತ್ತಮ ಸ್ನೇಹಜೀವಿಯಾಗಿ ಸಂಘಟನಾ ಚಾತಿರ್ಯವನ್ನು . ಜಿಲ್ಲೆ ಹಾಗೂ ತಾಲೂಕಿನ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇಕ್ಬಾಲ್ ಮಾಸ್ತರ್ ಸ್ವ-ಸಹಾಯ ಗುಂಪುಗಳನ್ನು ಜಿಲ್ಲೆಯಲ್ಲಿ ಸಂಘಟಿಸಿದ್ದಾರೆ.

ಬಂಟ್ವಾಳ ತಾಲೂಕು ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ, ವಿದ್ಯಾಥರ್ಿ ವೇತನ, ಆಥರ್ಿಕ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ, ಹೆಣ್ಮಕ್ಕಳ ಮದುವೆಗೆ ನೆರವಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್, ಚಟುಕು ಸಾಹಿತ್ಯ ಪರಿಷತ್, ಬ್ಯಾರಿ ಸಾಹಿತ್ಯ ಪರಿಷತ್, ಬಂಟ್ವಾಳ ಜೇಸೀಸ್, ರೋಟರಿ ಕ್ಲಬ್, ಶಿಕ್ಷಕರ ಸಂಘ, ಜಂಇಯ್ಯತ್ತುಲ್ ಫಲಾಹ್, ಸಂಯುಕ್ತ ಜಮಾಅತ್, ವಿ-ಕನೆಕ್ಟ್ ವ್ಯಾಟ್ಸ್ಅಪ್ ಗ್ರೂಪ್ ವಿವಿಧ ಸಾಮಾಜಿಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.

ಜನವರಿಯಲ್ಲಿ ನಡೆಸಲು ಉದ್ದೇಶಿಸಲಾದ ಪಂಚಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ರೂವಾರಿಯಾಗಿದ್ದರು. ನಡುಮುಗೇರು, ನೆಹರೂನಗರ, ಪುಣಚ ತೋರಣಕಟ್ಟೆ, ಸಜೀಪನಡು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಮಾರು 20ವರ್ಷಗಳಿಂದ ಸೇವೆ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *