ಬಂಟ್ವಾಳ :    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಹಲವು ಕಾರ್ಯಕ್ರಮಗಳಿಂದಾಗಿ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ  ಬದುಕುವಂತಾಗಿದೆ.ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
  ಕಲ್ಲಡ್ಕ ಸಮೀಪದ ಪೂರ್ಲಿಪಾಡಿ ಮರಾಠಿ ಭವನದಲ್ಲಿ ಭಾನುವಾರ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ )ವಿಟ್ಲ ಇದರ ಪ್ರಗತಿ ಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯದ  7  ಒಕ್ಕೂಟದ  ಪದಗ್ರಹಣ ಸಮಾರಂಭದಲ್ಲಿ ಒಕ್ಕೂಟದ ಪದಾಧಿಕಾರಿಗಳ ದಾಖಲಾತಿ ಜವಾಬ್ದಾರಿಯ ಹಸ್ತಾಂತರಿಸಿ ಅವರು ಮಾತನಾಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು  ಪ್ರಗತಿ ಬಂದು ಸ್ವಸಹಾಯ  ಸಂಘಗಳ  ಕಲ್ಲಡ್ಕ ವಲಯ ಅಧ್ಯಕ್ಷೆ  ತುಳಸಿ ವಹಿಸಿದ್ದರು.         
ಮಾಜಿ ಶಾಸಕ. ಎ ರುಕ್ಮಯ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಭಾಗದ ಮಹಿಳೆಯರ  ಕ್ರಾಂತಿಕಾರಿ ಬದಲಾವಣೆಗೆ  ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿಯ  ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ,ಯೋಜನೆಯು ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರುಈ ಸಂದರ್ಭದಲ್ಲಿ ಶೇಖರ ಪೂಜಾರಿ ಕಾನೆ ಕೋಡಿ, ಶಂಕರನಾರಾಯಣ ಐತಾಲ್, ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಇದಕ್ಕು ಮೊದಲು ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಕಾಂಪ್ರಬೈಲ್ ಹಾಗೂ ಬೃಂದಾವನ ಬಾಲ ಗೋಕುಲ ನೆಲ್ಲಿ ಶಂಭುಗ ತಂಡದಿಂದ  ಭಜನಾ ಸಂಕೀರ್ತನೆ ನಡೆಯಿತು.

ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ, ನೇತಾಜಿ ಯುವಕ ಮಂಡಲ (ರಿ.) ಕಲ್ಲಡ್ಕದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ , ಉದ್ಯಮಿ ಗಣೇಶ್ ಶೆಟ್ಟಿ ಗೋಳ್ತಮಜಲು, ಜಿಲ್ಲಾ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಲ್ಲಡ್ಕ ವಲಯ ಜನಜಾಗೃತಿ  ವೇದಿಕೆ ಅಧ್ಯಕ್ಷ ವೆಂಕಟರಾಯ ಪ್ರಭು, ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಶೌರ್ಯ ವಿಪತ್ತು  ನಿರ್ವಹಣಾ ಘಟಕ ಅಧ್ಯಕ್ಷ ಗಣೇಶ್ ನಾಯ್ಕ, ಒಕ್ಕೂಟಗಳ ನಿಕಟಪೂರ್ವ  ಅಧ್ಯಕ್ಷರುಗಳಾದ ಶಾಂಭವಿ ಆಚಾರ್ಯ, ದಯಾನಂದ ಗೌಡ, ಸೀತಾ ಆಚಾರ್ಯ, ಸೀತಾರಾಮ್ ಶೆಟ್ಟಿ, ಮಮತಾ, ಉಮಾವತಿ, ಮಮತಾ ಶೆಟ್ಟಿ, ಒಕ್ಕೂಟಗಳ ನೂತನ ಅಧ್ಯಕ್ಷರುಗಳಾದ ಚಿದಾನಂದ ಸುವರ್ಣ, ಮಾಧವ ಸಾಲಿಯಾನ್, ಸುನಿಲ್ ನಾಯ್ಕ, ವೀಣಾ, ಚಂದ್ರಾವತಿ, ಶಾಲಿನಿ, ನಾಗಪ್ಪ, ಮೊದಲಾದವರು  ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರುಗಳು, ಕಲ್ಲಡ್ಕ ಶೌರ್ಯ ವಿಪತ್ತು  ನಿರ್ವಹಣಾ ಘಟಕದ ಸದಸ್ಯರುಗಳು ಭಾಗವಹಿಸಿದ್ದರು.
ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿ,ಸೇವಾಪ್ರತಿನಿಧಿ ಅಶ್ವಿನಿ  ಒಕ್ಕೂಟದ ಸಾಧನಾ ವರದಿ ವಾಚಿಸಿದರು. ಚಿದಾನಂದ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದ್ದರು. ಸೇವಾ ಪ್ರತಿನಿಧಿ ವಿದ್ಯಾ  ವಂದಿಸಿದರು. ಸಂತೋಷ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟಗಳ ಸೇವಾ ಪ್ರತಿನಿಧಿಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ  ಬಳಿಕ ಸದಸ್ಯರಿಂದ ವಿವಿಧ  ಸಾಂಸ್ಕೃತಿಕ  ಕಾರ್ಯಕ್ರಮಗಳು ಜರಗಿತು.

By Suddi9

Leave a Reply

Your email address will not be published. Required fields are marked *