ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು  ಮೋಹನ ಪೂಜಾರಿ ಮುಜಲ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಅಮೀನ್ ಪೆರಾಜೆ ಅವರು, ಹಿಂದಿನ ಕಾಲದ ಕೇರಳದಲ್ಲಿ ಇದ್ದ ಮೇಲು-ಕೀಳು ಭೇದಭಾವ ಹಾಗೂ ಅನಿಷ್ಟ ಪದ್ಧತಿಗಳಿಂದ ಸಮಾಜದಲ್ಲಿ ಅಸಮಾನತೆ ನೆಲೆಸಿತ್ತು. ಇಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ, ಸಮಾನತೆ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಮಾಜವನ್ನು ಮುನ್ನಡೆಸುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.


ಕಾರ್ಯಕ್ರಮವು ಭಜನಾ ಸಂಕೀರ್ತನೆಯ ಮೂಲಕ ಆರಂಭಗೊಂಡಿತು. ಭಜನಾ ತಂಡದಲ್ಲಿ ಜನಾರ್ದನ ಪೂಜಾರಿ ಕೊಡಂಗೆ, ಬಾಲಕೃಷ್ಣ ಪೂಜಾರಿ ಶೇರ, ಯಶೋಧರ, ಸುಜಿತ್ ಬಾಕಿಲ ಹಾಗೂ ಲೋಕೇಶ್  ಭಾಗವಹಿಸಿ ಭಜನಾ ಸೇವೆ ಸಲ್ಲಿಸಿದರು.


ಕಾರ್ಯಕ್ರಮದ ಅಧ್ಯಕ್ಷರಾದ ಗಣೇಶ್ ಪೂಜಾರಿ ಅವರು ಸ್ವಾಗತಿಸಿದರು. ಶ್ರೀಧರ ಪೂಜಾರಿ ಮುಜಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ನಿರೂಪಣೆಗೈದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ದೇರಣ್ಣ ಪೂಜಾರಿ, ಕೃಷ್ಣಪ್ಪ ಪೂಜಾರಿ ಮುಜಲ, ಸುರೇಶ್ ಪೂಜಾರಿ ಬಾಕಿಲ, ವಿಶ್ವನಾಥ ಪೂಜಾರಿ, ಗಂಗಾಧರ ಪೂಜಾರಿ ಮುಜಾಲ, ಬಾಲಕೃಷ್ಣ ಪೂಜಾರಿ ಮುಜಲ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *