ಬಂಟ್ವಾಳ: ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಿ.ಮಂಚಿ ಕುಕ್ಕಾಜೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಕೇಶವ ರಾವ್ ಎನ್ ರವರು ಸಭೆಯ ಅಧ್ತಕ್ಷತೆ ವಹಿಸಿ ಮಾತಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ೨೮೭.೨೧ ಕೋ.ರೂ. ವ್ಯವಹಾರ ನಡೆಸಿ ೧೩,೭೬೧,೦೨೮.೭೭ ರೂ. ಲಾಭ ಗಳಿಸಿದೆ ಎಂದರಲ್ಲದೆ ಈ ಸಂದರ್ಭ ಸದಸ್ಯರಿಗೆ ಶೇ. ೧೬% ಡಿವಿಡೆಂಟನ್ನು ಘೋಷಿಸಿದರು.

ಸಂಘದಲ್ಲಿ ಒಟ್ಟು ೩೧೭೨ ಸದಸ್ಯರಿದ್ದು,೩೫೫೬೮೬೧೫.೦೦ ರೂ.ಪಾಲು ಬಂಡವಾಳ, ೪೯೮೪.೧೦ ಲಕ್ಷ ಠೇವಣಿ ಹೊಂದಿದೆ ಎಂದ ಅವರು ೪೪೧೦.೦೪ ಲಕ್ಷ ಸಾಲ ವಿತರಿಸಲಾಗಿದೆ. ಸಂಘದಲ್ಲಿ ೨೫೧ ಸ್ವಸಹಾಯ ಗುಂಪುಗಳು ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ವಿವಿಧ ಉದ್ಧೇಶಗಳಿಗೆ ೩೦೫.೪೬ ಲಕ್ಷ ರೂ. ಸಾಲ ವಿತರಿಸಲಾಗಿದೆ. ಸಂಘದ ಉತ್ತಮ ಸಾಧನೆಗಾಗಿ ಕಳೆದ ಸತತ ೫ ವರ್ಷದಿಂದ ದ.ಕ.ಜಿ.ಕೇ.ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಗೂ ಭಾಜನವಾಗುತ್ತಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಿ. 2025-26ನೇ ಸಾಲಿನ ವರದಿ, ಲೆಕ್ಕಪತ್ರ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು.ಇದೇ ವೇಳೆ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ರು ಅಭಿನಂದಿಸಲಾಯಿತು. ಸಂಘವನ್ನು ಮುನ್ನಡೆಸಿದ ಹಿರಿಯರನ್ನು ಗೌರವಿಸಲಾಯಿತು.
ನಿರ್ದೇಶಕರಾದ ಸುರೇಶ್ ಕೊಟ್ಟಾರಿ, ಗೋಪಾಲ ಎ., ನಾರಾಯಣ ನಾಯ್ಕ, ಚಂದಪ್ಪ ಕಂಚಿನಡ್ಕ, ಜಗದೀಶ ಎಸ್. ಶೆಟ್ಟಿ, ದೇವಿಪ್ರಸಾದ್ ಸಿ.ಕೆ., ಅಶೋಕ ಸಿ. ಆಶಾ ಪ್ರಭು, ನಳಿನಿ ಬಿ. ರೈ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಯೋಗೀಶ್ ಹೆಚ್. ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ನಿಶ್ಚಲ್ ಜಿ. ಶೆಟ್ಟಿ ಸ್ವಾಗತಿಸಿದರು.ನಿರ್ದೇಶಕ ಮೋಹನದಾಸ ಶೆಟ್ಟಿ ವಂದಿಸಿದರು.
