ಬಂಟ್ವಾಳ: ಕಾಂಕ್ರೀಟೀಕರಣಗೊಳಿಸಿ ಅಭಿವೃದ್ದಿಪಡಿಸಲಾದ ತಾಲೂಕಿನ ಸಜಿಪಮೂಡ ಗ್ರಾಮದ ಕೊಳಕೆ–ಪಂಜಾಜೆ ರಸ್ತೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ನಿಧಿಯ ಅನುದಾನದ ಮೂಲಕ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಕಾಂಕ್ರೀಟೀಕರಣಗೊಳಿಸಲಾಗಿದೆ. ಹಲವು ವರ್ಷಗಳಿಂದ ಸ್ಥಳೀಯರ ಬೇಡಿಕೆಯಾದ ಈ ರಸ್ತೆ ಕಾಮಗಾರಿಗೆ ಅನುದಾನ ಒದಗಿಸಲು ಮಾಜಿ ಸಚಿವ ರಮಾನಾಥ ರೈ ಅವರು ಶಿಫಾರಸು ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕಾಮಗಾರಿಗೆ ಸಹಕರಿಸಿದ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಶೋಭಿತ್ ಪೂಂಜಾ, ಮಾಜಿ ಉಪಾಧ್ಯಕ್ಷ ಎಸ್. ಸಿದ್ದೀಕ್, ಮಾಜಿ ಸದಸ್ಯರಾದ ಹಮೀದ್, ಯೋಗೀಶ್ ಬೆಳ್ಚಡ ಹಾಗೂ ಪ್ರಮೀಳಾ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ ಚಂದ್ರಶೇಖರ್ ಭಂಡಾರಿ, ಮಾಜಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಸಜೀಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ , ಸ್ಥಳೀಯ ಮುಖಂಡರಾದ
ಸ್ಟಿವನ್ ಡಿಸೋಜಾ ,ರಮೇಶ್ ಎಂ. ಪಣೋಲಿಬೈಲ್ ,ಸಜೀಪಮೂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಶ್ರೀದೇವಿ ಪ್ರಸಾದ್ ಪೂಂಜ ,ಎಸ್. ಸಿದ್ದಿಕ್ ಕೊಳಕೆ,,ಹಮೀದ್ ಕೊಳಕೆ,,ವಿಶ್ವನಾಥ್ ಬೆಲ್ಚಡ ,,ಯೋಗೀಶ್ ಬೆಲ್ಚಡ,ಕರೀಮ್ ಬೊಳ್ಳಾಯಿ ,ಕರೀಮ್ ಹಾಜಿ ಕೊಳಕೆ ,ಫಾರೂಕ್ ಕೊಳಕೆ , ,ಕಾಸಿಂ ಮಂಜನಾಡಿ, ,ಸುರೇಶ್ ಕೊಳಕೆ ,ಇಸ್ಮಾಯಿಲ್ ಪಂಜಾಜೆ,ಸೀತಾರಾಮ ಶೆಟ್ಟಿ, ಸಬೀರ್ ಕೊಳಕೆ ಮೊದಲಾದವರಿದ್ದರು.
