ಪೊಳಲಿ: ರಾಮಕೃಷ್ಣ. ಆಶ್ರಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ. 03 ರಿಂದ ಸೆ.05 ರವರೆಗೆ ಭಕ್ತಿಯಿಂದ ವಿಜೃಂಭಣೆಯಿಂದ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ಸೆಪ್ಟೆಂಬರ್ 3 ರಂದು ಗುರುವಾರ ಬೆಳಗ್ಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಮಹಾರಾಜ್ ಅವರು 24 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 26 ಭಜನಾ ಮಂಡಳಿಗಳು ಭಾಗವಹಿಸಿದ್ದವು. 4 ರಂದು ಶುಕ್ರವಾರ ಭಜನಾ ಕಾರ್ಯಕ್ರಮವು ಮಂಗಲೋತ್ಸವ ನಡೆಯಿತು.

ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಇದರಲ್ಲಿ 50 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ತುಳಸಿ ಅರ್ಚನೆಯ ನಂತರ ಅಭಿಷೇಕವನ್ನು ನೆರವೇರಿಸಲಾಯಿತು ಮತ್ತು ಬಾಲಕೃಷ್ಣನಿಗೆ ಬೆಣ್ಣೆ ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಲಾಯಿತು.

ಭಗವಂತನ ಸಮಸ್ತ ಸೃಷ್ಟಿಯ ಪರವಾಗಿ 18 ವಿಶೇಷ ಆರತಿಗಳನ್ನು ಮಾಡಿ ಪೂಜಾವಿಧಿವಿಧಾನಗಳನ್ನು ಸ್ವಾಮಿ ವಿವೇಕಚೈತನ್ಯಾನಂದ ಅವರು ನೆರವೇರಿಸಿದರು.
ಕುಮಾರಿ ರಿಯಾ ಅವರಿಂದ ಶ್ರೀಕೃಷ್ಣನಿಗೆ ಸಂಬಂಧಿಸಿದ ವಿಶೇಷ ನೃತ್ಯ ಕಾರ್ಯಕ್ರಮನೀಡಿದರು. ಭಾಗವಹಿಸಿದ ಎಲ್ಲಾ ಭಕ್ತಾಧಿಗಳು ವಿಶೇಷ ಅನ್ನಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ 1:30 ಕ್ಕೆ ಚಿಕ್ಕ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ (ಫ್ಯಾನ್ಸಿ ಡ್ರೆಸ್) ಕಾರ್ಯಕ್ರಮದಲ್ಲಿ 67 ಮಕ್ಕಳು ಭಾಗವಹಿಸಿದ್ದರು. ಈ ಸ್ಪರ್ಧೆಯು ಕೃಷ್ಣ ಮತ್ತು ರಾಧೆಯ ವಿಷಯಾಧರಿತವಾಗಿತ್ತು.

ವೇಷಭೂಷಣ ಸ್ಪರ್ಧೆಯು ಸಂಜೆ 5:30 ಕ್ಕೆ ಮುಕ್ತಾಯಗೊಂಡಿತು. ವಿಜೇತರಿಗೆ ನಗದು, ಬಹುಮಾನಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಬಹುಮಾನ ಪಡೆಯದವರಿಗೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.

ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯ ವಿಜೇತರಿಗೂ ಬಹುಮಾನಗಳನ್ನು ನೀಡಲಾಯಿತು.
ಸಂಜೆ 5:30 ರಿಂದ 6:30 ರವರೆಗೆ ಶ್ರೀ ಗೌರವ್ ಡಿ. ಶೆಟ್ಟಿ ಮತ್ತು ತಂಡದವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಊಟದ ನಂತರ ಆಧ್ಯಾತ್ಮಿಕ ಚಿಂತನಗೋಷ್ಠಿ ನಡೆಯಿತು ಇದರಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಮತ್ತು ಬ್ರಹ್ಮಚಾರಿ ಸಿದ್ಧಾರ್ಥ ಮಹಾರಾಜ್ ಅವರು ಕೃಷ್ಣನ ಜೀವನ, ಬೋಧನೆಗಳು, ತತ್ವಶಾಸ್ತ್ರ ಮತ್ತು ಎಲ್ಲರಿಗೂ ಅವುಗಳ ಪ್ರಸ್ತುತತೆಯ ಕುರಿತು ಮಾತನಾಡಿದರು.
ಸೆಪ್ಟೆಂಬರ್ 5 ರಂದು ಕೃಷ್ಣ ಲೀಲೋತ್ಸವವನ್ನು ಏರ್ಪಡಿಸಲಾಗಿತ್ತು. ಸಂಜೆ 4 ಗಂಟೆಗೆ ಅಲಂಕರಿಸಿದ ಟ್ಯಾಬ್ಲೋ ವಾಹನದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇರಿಸಿ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಮೆರವಣಿಗೆಯಲ್ಲಿ ಗ್ರಾಮಸ್ಥರೆಲ್ಲರು ಭಾಗವಹಿಸಿ ಅತ್ಯಂತ ವಿಜೃಂಭಣೆಯಿಂದ ನಡೆದ ಮೊಸರುಕುಡಿಕೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ‘ನಾಸಿಕ್ ಬ್ಯಾಂಡ್’ ವಾದ್ಯಗೋಷ್ಠಿ ಮತ್ತು ಭಕ್ತರ ಉತ್ಸಾಹಭರಿತ ನೃತ್ಯವು ವಿಶೇಷ ಆಕರ್ಷಣೆಯಾಗಿದ್ದವು. ಇದರಲ್ಲಿ ಪಾಲ್ಗೊಂಡವರು ಮಣ್ಣಿನ ಮಡಕೆಗಳನ್ನು ಒಡೆದರು. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 8 ಗಂಟೆಗೆ ‘ಕೃಷ್ಣ ಲೀಲೋತ್ಸವ’ವು ಸಂಪನ್ನಗೊಂಡಿತು.

ಈ ಮೂರು ದಿನಗಳ ಕಾರ್ಯಕ್ರಮವು ಎಲ್ಲಾ ಭಕ್ತರ ಮನಸ್ಸಿನಲ್ಲಿ ಸ್ಮರಣೀಯ ಕ್ಷಣಗಳನ್ನು ಉಳಿಸಿತು. ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತಾ, ಕೃಷ್ಣನ ಮೇಲಿನ ಪ್ರೀತಿಯೊಂದಿಗೆ ಉತ್ತಮ ಜಗತ್ತನ್ನು ಕಾಣಲು, ಶ್ರೀಕೃಷ್ಣನ ಬೋಧನೆಗಳು ಮತ್ತು ತತ್ವಗಳು ಎಲ್ಲೆಡೆ ಪಸರಿಸಲಿ.

By Suddi9

Leave a Reply

Your email address will not be published. Required fields are marked *