ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವತಿಯಿಂದ ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉತ್ಕರ್ಷ್ ೨೦೨೬ ಫೆಸ್ಟ್ ಕಾರ್ಯಕ್ರಮವು ಮೋಂತಿಮಾರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ದೀಪ ಪ್ರಜ್ವಲನ ಹಾಗೂ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮಕ್ಜೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರ ಮೋಂತಿಮಾರಿನ ಆಡಳಿತ ಸಹ ಮೊಕ್ತೇಸರರಾದ ಡಾ. ಮುಕುಂದ ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ದೇವಕಿ, ಶ್ರೀರಾಮ ಪದವಿ ವಿಭಾಗದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸುರೇಶ್ ರೈ ಇರಾ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಧೀರಜ್ ಬಲ್ಲೆಕೋಡಿ, ಮೋಂತಿಮಾರು ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ್ ನಾಡಾಜೆ, ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಕಾರ್ಯಕ್ರಮದ ಸಂಯೋಜಕರಾದ ಕು. ನವಿತ, ಸಹಸಂಯೋಜಕರಾದ ಕು. ಅನನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಯತಿರಾಜ್ ಪೆರಾಜೆ ಸ್ವಾಗತಿಸಿ, ಪ್ರಾಚಾರ್ಯ ಕೃಷ್ಣ ಪ್ರಸಾದ್ ಪ್ರಸ್ತಾವಿಸಿದರು, ವಿದ್ಯಾರ್ಥಿಗಳಾದ ಕು. ಅಕ್ಷತಾಲಕ್ಷ್ಮೀ ವಂದಿಸಿದರು, ಕು. ತ್ರಿಶಾ ಕಾರ್ಯಕ್ರಮ ನಿರ್ವಹಿಸಿದರು. ಲಿಖಿತ್ ನಾಯಕ್ ಪ್ರಾರ್ಥಿಸಿದರು.
