ಮಂಗಳೂರು: ಹೆದ್ದಾರಿಯಲ್ಲಿ ಲಾರಿ ತಡೆದು ದರೋಡೆಗೈದ ಆರೋಪಿ ಕೆ.ಸಿರೋಡ್ ನಿವಾಸಿ ಇಮ್ತಿಯಾಝ್(35) ಎಂಬಾತನನ್ನು ಉಳ್ಳಾಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತಂಡ ಮೋಂಟುಗೋಳಿ ಸಮೀಪ ಲಾರಿ ಚಾಲಕನ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೋಂಟುಗೋಳಿಯ ಎಂ.ಶರೀಫ್(29), ಕೈರಂಗಳ ಗುಂಡಳಿಕೆಯ ಮಹಮ್ಮದ್ ಇಮ್ರಾನ್ ಯಾನೆ ಅಬ್ಬು(20)ಮತ್ತು ನವಾಝ್ (25) ಎಂಬವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದರು.
ಇದೀಗ ಹೆದ್ದಾರಿ ದರೋಡೆಗೆ ಸಂಬಂಧಿಸಿ ಅದೇ ತಂಡದಲ್ಲಿದ್ದುಕೊಂಡು , ಉಳ್ಳಾಲ ವ್ಯಾಪ್ತಿಯಲ್ಲಿ ಇನ್ನಿತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಇಮ್ತಿಯಾಜ್ ನನ್ನು ಬಂಧಿಸಿದ್ದಾರೆ.
ಇಮ್ತಿಯಾಝ್ ಉಳ್ಳಾಲ ಭಗವತಿ ದೇವಸ್ಥಾನದ ಬಳಿ ಮಹಿಳೆಗೆ ಚಾಕು ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣ, ಅಂಗಡಿ ದರೋಡೆ ಮಾಡಿದ ಪ್ರಕರಣ, ಮತ್ತು ತಲಪಾಡಿಯಲ್ಲಿ ಬಾರ್ಗೆ ನುಗ್ಗಿ ಗಲಾಟೆ ನಡೆಸಿ ಹಪ್ತಾ ವಸೂಲಿ ಮಾಡಿದ ಪ್ರಕರಣದಲ್ಲಿ ಶಾಮೀಲಾಗಿದ್ದ.

