ಬಂಟ್ವಾಳ: ವಿವಿಧ ಕಾರಣಗಳಿಂದ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 11,196 ಫಲಾನುಭವಿಗಳ ಪಿಂಚಣಿಯನ್ನು ರದ್ದುಪಡಿಸಲಾಗಿದೆ.ಎಂದು ಕಂದಾಯ ಸಚಿವರು ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ ವಿಧಾನಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಉಪಮುಖ್ಯಮಂತ್ರಿಗಳು ಇದರಲ್ಲಿ 5,243 ಪ್ರಕರಣಗಳು ಇ-ಜನ್ಮ ದಾಖಲೆಯ ಆಧಾರದ ಮೇಲೆ ಮರಣ ಹೊಂದಿದವರು, 3,399 ಮರಣ ಪ್ರಕರಣಗಳು, 684 ಶಾಶ್ವತ ವಲಸೆ, 565 ಬಹು ಪ್ರಯೋಜನ ಪಡೆಯುತ್ತಿರುವ ಪ್ರಕರಣಗಳು ಹಾಗೂ 286 ವಿಎಒ ಪರಿಶೀಲನೆಯಲ್ಲಿ ಅನರ್ಹ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ 813 ಇತರೆ ಪ್ರಕರಣಗಳು, 168 ಆದಾಯ ಹೆಚ್ಚಳ ಮತ್ತು 38 ಮರುಮದುವೆ ಪ್ರಕರಣಗಳು ಕೂಡ ಸ್ಥಗಿತಕ್ಕೆ ಗುರುತಿಸಲಾದ ಪಟ್ಟಿಯಲ್ಲಿ ಸೇರಿದೆ ಎಂದು ಶಾಸಕರಾಜೇಶ್ ನಾಯ್ಕ್ ಅವರ ಮರುಪ್ರಶ್ನೆಗೆ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರು ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಒಟ್ಟು 37,291 ಫಲಾನುಭವಿಗಳು ದಾಖಲಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರು ಶಾಸಕರ ಉಪಪ್ರಶ್ನೆಗೆ ಉತ್ತರದಲ್ಲಿ ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಮುಂದುವರಿಯುವಂತೆ ಹಾಗೂ ಅನರ್ಹ ಪ್ರಕರಣಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶಕ್ಕೆ12 ಸಾ.ರೂ., ನಗರ ಪ್ರದೇಶಗಳಿಗೆ 17 ಸಾ.ರೂ.ನಂತೆ ನಿಗದಿ ಪಡಿಸಿದ್ದು ಈ ಅದಾಯ ಮಿತಿಯನ್ನು 32 ಸಾ.ರೂ. ಮಾರ್ಪಡಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದ್ದು ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆದು ಕ್ರಮವಹಿಸಲಾಗುತ್ತದೆ ಎಂದು ಕಂದಾಯ ಸಚಿವ ಡಾ.ಪರಮೇಶ್ವರ್ ಅವರು ಶಾಸಕ ರಾಜೇಶ್ ನಾಯ್ಕ್ ಅವರಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
