ಬಂಟ್ವಾಳ: ಕಲ್ಲಡ್ಕ‌ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ೨೦೨೬-೨೭ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳ ಸ್ವ ಆಗತ-ಸ್ವಾಗತ ೨೦೨೬ ಕಾರ್ಯಕ್ರಮವು ಮಂಗಳವಾರ ಕಾಲೇಜಿನ ಆಜಾದ್ ಭವನದಲ್ಲಿ ನಡೆಯಿತು.
 

ಆರಂಭದಲ್ಲಿ ಗಣ್ಯರಿಂದ ದೀಪ ಪ್ರಜ್ವಲನ ಹಾಗೂ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ,  ಅತಿಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನೂತನ  ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ಅರ್ಪಿಸುವ ಮೂಲಕ ಪದವಿ ಶಿಕ್ಷಣಕ್ಕೆ ಮುಂದಡಿಯಿಟ್ಟರು. ಹೊಸ ವಿದ್ಯಾರ್ಥಿಗಳಿಗೆ ಹಾಗೂ ಹೊಸ ಉಪನ್ಯಾಸಕರಿಗೆ ಆರತಿ ಬೆಳಗಿ,  ಕುಂಕುಮ ಹಚ್ಚಿ ಸ್ವಾಗತಿಸಲಾಯಿತು, ಬಳಿಕ  ವಿದ್ಯಾರ್ಥಿಗಳು ಹಿರಿಯರ ಆಶೀರ್ವಾದ ಪಡೆದರು. 

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ, ರಾ. ಸ್ವ. ಸಂಘದ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ವಿದ್ಯಾರ್ಥಿಗಳು ದೇಶಭಕ್ತಿಯಿಂದ ಧರ್ಮ ರಕ್ಷಣೆಗಾಗಿ ಜೀವನ ನಡೆಸುವ ಸಂಕಲ್ಪ ತೊಡಬೇಕು ಎಂದರು. 
 
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಮಂಗಳೂರು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ , ಸಿಇಒ ರಾಘವೇಂದ್ರ ಎಸ್ ಭಟ್ ಕಾಲೇಜಿನ ನೂತನ ವೆಬ್‌ಸೈಟ್ ನ್ನು ಅನಾವರಣಗೊಳಿಸಿದರು. 
ಬಳಿಕ ಮಾತನಾಡಿ ಪಠ್ಯ- ಪಠ್ಯೇತರ ಶಿಕ್ಷಣಗಳ ಜೊತೆಗೆ ಜೀವನ ಶಿಕ್ಷಣವನ್ನು ಕೂಡ ಒದಗಿಸುತ್ತಾ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
 
ಬೆಂಗಳೂರಿನ ಉದ್ಯಮಿ ದರ್ಶನ್ ಆರ್ ಲಮಾಣಿ, ಬೆಂಗಳೂರಿನ ಅರುಣ್ ಮತ್ತು ಕಂಪನಿಯ ಮೈನಿಂಗ್ ಮತ್ತು ಡೆವಲಪರ್ ಅರುಣ್ ಗೌಡ, ಬೆಂಗಳೂರಿನ ಪ್ರಗತಿಪರ  ಕೃಷಿಕರಾದ  ಗೋವಿಂದರಾಜ್, ಬಿಇ ಸಿವಿಲ್ ಇಂಜಿನಿಯರ್ ಸಿಂಗರ್ ಮತ್ತು ಬಾಕ್ಸರ್  ಸಿದ್ವಿನ್ ಹೆಗಡೆ, ಕೆಎಂಸಿ ಮಣಿಪಾಲ ಮಾಹೆ ಇದರ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ದೀಪಕ್ ರಾಮ್ ಬಾಯಿರಿ, ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ  ಅಭಿವೃದ್ಧಿ ಸಮಿತಿಯ  ಉಪಾಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರಾದ  ನಾರಾಯಣ ಭಂಡಾರಿ ಅವರು ಅತಿಥಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 
 
ಈ ಸಂದರ್ಭದಲ್ಲಿ ಕಾಲೇಜಿನ ಮಾಹಿತಿ ಕೈಪಿಡಿ “ಶಿಕ್ಷಣ ದರ್ಶಿನಿ” ಯನ್ನು ಬಿಡುಗಡೆಗೊಳಿಸಲಾಯಿತು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿದ್ದರು. ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ   ಸ್ವಾಗತಿಸಿದರು,  ವಿದ್ಯಾರ್ಥಿನಿ ಕು. ತ್ರಿಶಾ ವಂದಿಸಿದರು, ವಿದ್ಯಾರ್ಥಿ ಜಯಸೂರ್ಯ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *