ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ವಿಂಶತಿ ಪರ್ವ ಪ್ರಯುಕ್ತ ನವೆಂಬರ್ ನಲ್ಲಿ ನಡೆಯುವ ಅದ್ದೂರಿ ಶಾಲಾ ವಾರ್ಷಿಕೋತ್ಸವದ ಲಾಂಛನ ಆ.18ರಂದು ಮಂಗಳವಾರ ಬಿಡುಗಡೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯ ಅಧ್ಯಕ್ಷ ವೆಂಕಟೇಶ ನಾವಡ ವಹಿಸಿದ್ದರು. ಪೊಳಳಿ ರಾಮಕೃಷ್ಣ ಮಠದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯುವ ಹಲವು ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಾಯ ಕಾರಂತ, ಯಶವಂತ ಪೂಜಾರಿ, ಲೋಕೇಶ ಭರಣಿ , ಚಂದ್ರಾವತಿ ದೇವಾಡಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸುಬ್ರಾಯ ಪೈ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕರಾದ ಮುರಳೀಧರ ಆಚಾರ್ಯ ವಿಂಶತಿ ಪರ್ವದ ಲಾಂಛನದ ರಚನೆಯ ಹಿಂದಿನ ಅರ್ಥವನ್ನು ಸವಿಸ್ತಾರವಾಗಿ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಯಂತ ಆಚಾರ್ಯ ವಂದಿಸಿದರು. ಶಿಕ್ಷಕಿ ವಸಂತಿ ಕಾರ್ಯಕ್ರಮ ನಿರೂಪಿಸಿದರು.
