ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ.) ಬಂಟ್ವಾಳ ತಾಲೂಕು ಪಾಣೆಮಂಗಳೂರು ವಲಯದಅಮ್ಟಾರು ಹಾಗೂ ಪಾಣೆಮಂಗಳೂರು ಒಕ್ಕೂಟದ  ಪದಗ್ರಹಣ ಹಾಗೂ ಸಾಧನ ಸಮಾವೇಶ   ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ  ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಸುವಂತ ಕಾರ್ಯಕ್ರಮಗಳು ಸ್ವಸ್ಥ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ವಸಂತಿ ಗಂಗಾಧರ  ವಹಿಸಿದ್ದರು.       
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಧರ್ಮಸ್ಥಳದ ಮೀಡಿಯಾ ಹಾಗೂ ಸಂವಹನ ವಿಭಾಗದ ನಿರ್ದೇಶಕ ಪ್ರದೀಪ್  ಅವರು  ಒಕ್ಕೂಟ ದ ಜವಾಬ್ದಾರಿಯನ್ನು ಹಸ್ತಾಂತರಿಸಿದರು.                 ನ್ಯಾಯವಾದಿ ಶೈಲಜಾ ರಾಜೇಶ್ ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.  

              
ವೇದಿಕೆಯಲ್ಲಿ  ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷೆ  ಚಿತ್ರ ಎಡಪಡಿತ್ತಾಯ,ವಲಯ ಜನಜಾಗೃತಿ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಮೆಲ್ಕಾರ್,ಗಣೇಶ ಶೆಟ್ಟಿಗಾರ್, ಚಿತ್ರಲೇಖ ಉಪಸ್ಥಿತರಿದ್ದರು.  ಪಾಣೆಮಂಗಳೂರ ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ  ಸ್ವಾಗತಿಸಿದರು,  ಸೇವಾ ಪ್ರತಿನಿಧಿ ಸುಲೋಚನಾ ಸಾಧನಾ ವರದಿ ವಾಚಿಸಿದರು. ಆಂತರಿಕ ಲೆಕ್ಕ ಪರಿಶೋಧಕ ಸುಬ್ರಾಯ ನಾಯ್ಕ್, ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.   

                       
ಒಕ್ಕೂಟ  ಪದಾಧಿಕಾರಿಗಳು ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *