ಬಂಟ್ವಾಳ: ವಾಹನವೊಂದರಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಭೇದಿಸಿದ್ದು,ಈ ಸಂಬಂಧ ಓರ್ವನನ್ನು ಬಂಧಿಸಿ 1.05 ಕೋ.ರೂ.ಗೂ ಅಧಿಕ ಮೌಲ್ಯದಎಂಡಿಎಂಎ ಮಾದಕ ವಸ್ತು ಹಾಗೂ ಕೊಕೈನ್ ಸಹಿತ ಇತರೆ ಸೊತ್ತುಗಳನ್ನು ವಶಪಡಿಸಿದ್ದಾರೆ.

ಶನಿವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಮತ್ತವರ ಸಿಬ್ಬಂದಿಗಳು ಬಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಹಾಸನ ಕಡೆಯಿಂದ ಮಂಗಳೂರಿನತ್ತ  ಸಾಗುತ್ತಿದ್ದ ಟೊಯೋಟೋ ಕಾರನ್ನು ಅನುಮಾನದಿಂದ   ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಎಂಡಿಎಂಎ ಮಾದಕ ವಸ್ತು ಹಾಗೂ ಕೊಕೈನ್ ಪತ್ತೆಯಾಗಿದೆ.
ತಕ್ಷಣ ಕಾರು ಚಾಲಕ  ಬೆಂಗಳೂರಿನ ಕೆಂಗೇರಿ ಮೂಲದ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35)ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ  ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿರುವುದನ್ನು  ಬಾಯಿಬಿಟ್ಟಿದ್ದಾನೆಂದು ತಿಳಿದು ಬಂದಿದೆ.
ಬಂಟ್ವಾಳ ಉಪವಿಭಾಗದ ಎಎಸ್ಪಿ ಯಶ್ ಕುಮಾರ್ ಅವರ ಮಾರ್ಗದರ್ಶದಲ್ಲಿ ಆರೋಪಿಯನ್ನು  ಮತ್ತಷ್ಟು ತನಿಖೆಗೊಳಪಡಿಸಿದಾಗ  ನೈಜೀರಿಯಾ ಮೂಲದ ಮಹಿಳೆಯೋರ್ವಳು ಮಾದಕವಸ್ತುಗಳನ್ನು ಬೆಂಗಳೂರಿಗೆ ತಂದುಕೊಡುತ್ತಿದ್ದು, ಅದನ್ನು ಆರೋಪಿ  ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. 

ಈ ಜಾಲದ ಹಿಂದೆ ಇನ್ನಿತರರು  ಶಾಮೀಲಾಗಿರುವ ಶಂಖೆ ವ್ಯಕ್ತವಾಗಿದ್ದು,ಈ ನಿಟ್ಟಿನಲ್ಲಿ ಪೊಲೀಸರಿಂದ ತನಿಖೆ ಮುಂದುವರಿದಿದೆ.ಆರೋಪಿಯ ವಿರುದ್ಧ ಈ ಹಿಂದೆಯೂ 20ಕ್ಕೂ ಅಧಿಕ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಬಂಧಿತ ಆರೋಪಿಯಿಂದ 538.63 ಗ್ರಾಂ ಎಂಡಿಎಂಎ ಮಾದಕವಸ್ತ ಹಾಗೂ 99.12 ಗ್ರಾಂ ಕೊಕೈನ್, ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ,ಕಾರು ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶ ಪಡಿಸಿದ್ದಾರೆ.ಇವುಗಳ ಒಟ್ಟು ಮೌಲ್ಯ1,05,59,450 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *