ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ಉದ್ಘಾಟನಾ ಕಾರ್ಯಕ್ರಮವು  ನಡೆಯಿತು.  ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಕಡೆಗಳಲ್ಲೂ, ಎಲ್ಲಾ ಸಮಯಗಳಲ್ಲೂ ಗೌರವವನ್ನು ಪಡೆಯುವ ಅತಿಶ್ರೇಷ್ಠವಾದ ವೃತ್ತಿಯೇ ಶಿಕ್ಷಕ ವೃತ್ತಿ ಎಂದರು. 
 
ಶಿಕ್ಷಕಿಯಾಗಿದ್ದ, ಪ್ರಸ್ತುತ ಸುರತ್ಕಲ್‌ನ  “ಅರಳು”  ಆಪ್ತ ಸಮಾಲೋಚನಾ ಕೇಂದ್ರದ ಖ್ಯಾತ ಆಪ್ತ ಸಮಾಲೋಚಕಿ  ತೇಜಾಕ್ಷಿ ವಿ ಶೆಟ್ಟಿ ಇವರು ಭವಿಷ್ ಘಟಕವನ್ನು ಗ್ರಂಥಪೂಜನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಶಿಕ್ಷಕ ವೃತ್ತಿಯ ಶ್ರೇಷ್ಠತೆ ಬಗ್ಗೆ  ವಿಚಾರಗಳನ್ನು ತಿಳಿಸಿದರಲ್ಲದೆ ವಿದ್ಯಾರ್ಥಿಗಳಲ್ಲಿ ಉತ್ತಮ ಪರಿವರ್ತನೆಯನ್ನು ತರುವುದೇ ಶಿಕ್ಷಕ ವೃತ್ತಿಯ ಮುಖ್ಯ ಉದ್ದೇಶವಾಗಿದ್ದು,ಆ ಮೂಲಕ ದೇಶವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದರು.  ಪದವಿ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ , ಭವಿಷ್ ನಿರ್ದೇಶಕಿ  ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 
 ಭವಿಷ್ ಸಹ ನಿರ್ದೇಶಕಿ ಬಬಿತಾ ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕಿ  ಪ್ರಸನ್ನಾ ವಂದಿಸಿದರು. ವಿದ್ಯಾರ್ಥಿನಿ ಕು. ಸ್ತುತಿ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *