ಬಂಟ್ವಾಳ: ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ
ಕಕ್ಯಪದವಿನ ಯುವತಿ ಲಾವಣ್ಯ ಗೌಡಳನ್ನು ಬರ್ಬರವಾಗಿ ಹತ್ಯೆಗೈದ ಹಂತಕ ಚೇತನ್ ನನ್ನು ಗುರುವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ತಾಯಾಲಯ ಈತನಿಗೆ ಆ.12 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

೧೧ ದಿನಗಳ ಬಳಿಕ ಹಂತಕ ಚೇತನ್ ನನ್ನು ಸೋಮವಾರ ಅಧಿಕೃತವಾಗಿ ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಜು.31 ರ ವರೆಗೆ ನಾಲ್ಕುದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.
ಮಂಗಳವಾರ ಸಂಜೆ ಕೃತ್ಯ ನಡೆದ ಸ್ಥಳ ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ,ಬುಧವಾರದಂದು ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರ ಖರೀದಿಸಿದ ಉಪ್ಪಿನಂಗಡಿಯಲ್ಲಿನ ಅಂಗಡಿಯೊಂದಕ್ಕೆ ಸಹಿತ ವಿವಿದೆಡೆ ಕರದೊಯ್ದು ಸ್ಥಳ ಮಹಜರು ಪ್ರಕ್ರಿಯೆಯನ್ನು ಪೊಲೀಸರ ತನಿಖಾ ತಂಡ ಪೂರೈಸಿತು.
ಪೊಲೀಸ್ ಕಸ್ಟಡಿ ಶುಕ್ತವಾರದ ವರೆಗಿದ್ದರೂ,ಸ್ಥಳಮಹಜರು ಸೇರಿದಂತೆ ಎಲ್ಲಾ ಪ್ರಕ್ರಿಯೆಯನ್ನು ಗುರುವಾರ ಮಧ್ಯಾಹ್ನದ ಒಳಗಾಗಿ ಪೂರೈಸಿರುವ ಪೊಲೀಸರ ತನಿಖಾ ತಂಡ ಸಂಜೆಯ ವೇಳೆಗೆ ಮತ್ತೆ ನ್ಯಾಯಾಲಯದ ಮುಂದೆ ಲಾವಣ್ಯಹಂತಕ ಚೇತನ್ ನನ್ನು ಹಾಜರುಪಡಿಸಲಾಗಿದೆ.ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜುಲೈ 16 ರಂದು ಸಂಜೆ 5.45 ರಹೊತ್ತಿಗೆ ಮನೆಗೆ ತೆರಳಲೆಂದು ಬಿ.ಸಿ. ರೋಡ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಕಕ್ಕೆಪದವಿನ ಅಮಾಯಕ ಯುವತಿ ಲಾವಣ್ಯಳನ್ನು ಹೊಂಚು ಹಾಕಿ ಕುಳಿತಿದ್ದ ಗೇರುಕಟ್ಟೆಯ ಚೇತನ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ರಾಜಾರೋಷವಾಗಿ ಕಾರಿನಲ್ಲಿ ಪರಾರಿಯಾಗಿದ್ದ.ಮರುದಿನ ಮಂಗಳೂರು ಹೊರವಲಯದ ಪಚ್ಚನಾಡಿಯಲ್ಲಿ ಪೊಲೀಸರ ಬಂಧನಕ್ಕೊಳಗಾಗಿದ್ದ.
ಲಾವಣ್ಯ ತನ್ನ ಪ್ರೀತಿಯನ್ನುನಿರಾಕರಿಸಿದ ಹಿನ್ನಲೆಯಲ್ಲಿ ಆಕೆಯ ಕೊಲೆಗೆ ಸಂಚು ರೂಪಿಸಿ ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ನಿಲ್ದಾಣದಲ್ಲಿ ಹಾಡುಹಗಲೇ ಅಲ್ಲಿದ್ದ ಸಾರ್ವಜನಿಕರ ಸಮ್ಮುಖದಲ್ಲಿ ಮಾರಕಾಸ್ತ್ರ ಬೀಸಿ ತನ್ನ ಸೇಡು ತೀರಿಸಿಕೊಡು ಈಗ ಜೈಲುಪಾಲಾಗಿದ್ದಾನೆ.
