ಪೊಳಲಿ : ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷರಾದ ರವೀಂದ್ರ ಚೌಹಾಣ್ ಗುರುವಾರ ಭೇಟಿ ನೀಡಿದರು. ಶ್ರೀ ಕ್ಷೇತ್ರದ ಆರ್ಚಕ ಪದ್ಮಾನಾಭ ಭಟ್ ಪ್ರಸಾದ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ಸಚಿನ್ ಅಡಪ,ಯಶವಂತ ಕೊಟ್ಯಾನ್ ಪೊಳಲಿ ,ಮೂಡಬಿದ್ರೆ ಮಂಡಲ ಪ್ರಸಿಡೆಂಟ್ ದಿನೇಶ್ ಪುತ್ರನ್ , ಮಂಡಲ ಪ್ರ.ಕಾರ್ಯದರ್ಶಿ ರಂಜಿತ್ ಪೂಜಾರಿ, ಹರಿಪ್ರಶಾದ್ ಶೆಟ್ಟಿ, ಅಭಿಲಾಷ್ ಕಟೀಲ್, ವಿಜಯ ಕುಮಾರ್ ಬಜಪೆ, ರಾಜೇಶ್ ಅಮೀನ್ ಬಜಪೆ , ಯುವ ಮೋರ್ಛಾ ಪ್ರಸಿಡಂಟ್ ಕುಮಾರ್ ಪ್ರಸಾದ್ ಹಾಗೂ ದೇವಳದ ಕಾರ್ಯನಿರ್ವಣಾಧಿಕಾರಿ ಕೆ. ಪಿ ಚಂದ್ರಮೋಹನ್ ಉಪಸ್ಥಿತರಿದ್ದರು.
