ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ “ಗುರುಪೂರ್ಣಿಮೆ”ದಿನವನ್ನು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಸಲಾಯಿತು.
ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರು, ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಪರ್ಕ ಪ್ರಮುಖ್ ಸುಜಿತ್ ಕೊಟ್ಟಾರಿ ಮಾತನಾಡಿ, ಗುರುಗಳು ಎಂದರೆ ನಮ್ಮನ್ನು ತಿದ್ದಿ ತೀಡಿ ಸರಿಯಾದ ದಾರಿಯನ್ನು ತೋರುವವರು. ನಮ್ಮ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸುವವರು ಎಂದರು.
ಗುರುಗಳು ವಿದ್ಯಾರ್ಥಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸುತ್ತಾರೆ .

ಗುರುದಕ್ಷಿಣೆ ಎನ್ನುವುದು ಶಿಕ್ಷಕರು ನೀಡಿದಂತ ಸಂಸ್ಕಾರ. ಗುರುಗಳ ಪ್ರೇರಣೆಯಿಂದ ಏನಾದರೂ ಸಾಧಿಸಬಹುದು. ಓದಿನಲ್ಲಿ ಹೆಚ್ಚಿನ ಆಸಕ್ತಿ , ತ್ಯಾಗ, ಸಮರ್ಪಣೆ ಭಾವ ಹೊಂದಿರಬೇಕು. ಹೆಚ್ಚು ಪುಸ್ತಕಗಳನ್ನು ಓದುವುದು, ಅನೇಕ ಪುರಾಣ ಕಥೆಗಳನ್ನು ಓದಿ ವೇದವ್ಯಾಸರಂತಹ ಒಳ್ಳೆಯ ವ್ಯಕ್ತಿತ್ವವನ್ನು ಹಾಗೂ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಭಾರತಮಾತೆಗೆ ದೀಪಪ್ರಜ್ವಲನೆ ಮಾಡಲಾಯಿತು. ನಂತರ ಅತಿಥಿ ಗಣ್ಯರಿಗೆ ತಾಂಬೂಲ ನೀಡಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಾದ ಭೂಮಿಕಾ , ಸಾನ್ವಿ ಸನಿಲ್ ಮತ್ತು ವಚನ ಪ್ರೇರಣಾ ಗೀತೆ ಹಾಡಿದರು.
ಸಜಿಪ ಪಡು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೀತಾ , ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮಾತೃಭಾರತಿ ಸದಸ್ಯೆ ಸಂಧ್ಯಾ ಕುದ್ರೆಬೆಟ್ಟು , ಶ್ರೀರಾಮ ವಿದ್ಯಾಕೇಂದ್ರದ ಸಹ ಕಾರ್ಯನಿರ್ವಹಣಾಧಿಕಾರಿ, ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು , ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಣಮ್ಯ ಸ್ವಾಗತಿಸಿ, ಅನಿಖಾ ಕೆ ಸಿ ನಿರೂಪಿಸಿ, ರೇಷ್ಮಾ ಪಿ ಆರ್ ವಂದಿಸಿದರು.
