ಬಂಟ್ವಾಳ: ಸಮಾಜ ಸೇವೆಯಿಂದ ಆತ್ಮಸಂತೃಪ್ತಿಯನ್ನು ಕಾಣಬೇಕು . ದುರ್ಬಲರಿಗೆ ಸಹಾಯ ಮಾಡುವುದರಿಂದ ಜೀವನವು ಸಾರ್ಥಕವಾಗುತ್ತದೆ ಎಂದು  ಬರಿಮಾರು ಚರ್ಚಿನ ಧರ್ಮಗುರುಗಳಾದ ಪೆಟ್ರಿಕ್ ಸಿಕ್ವೇರಾ ಹೇಳಿದರು.
ಅವರು ಲಯನ್ಸ್ ಕ್ಲಬ್ ಮಾಣಿ ಇದರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ನೂತನ ಅಧ್ಯಕ್ಷ ವಿನ್ಸೆಂಟ್ ಲಸ್ರಾದೋ, ಕಾರ್ಯದರ್ಶಿ ಅನಿಲ್ ಕುಮಾರ್ ಪೆರಾಜೆ , ಕೋಶಾಧಿಕಾರಿ ರೊನಾಲ್ಡ್ ಮೊನಿಸ್ ಮತ್ತು ಅವರ ತಂಡಕ್ಕೆ ಶುಭಹಾರೈಸಿದರು.

2026-27ರ ಪದಾಧಿಕಾರಿಗಳ ಪದಗ್ರಹಣವನ್ನು ಲಯನ್ಸ್ ಜಿಲ್ಲಾ ಎರಡನೇ ಗವರ್ನರ್ ಲ|| ವೆಂಕಟೇಶ್ ಹೆಬ್ಬಾರ್ ಅವರು ಮಾಣಿ ಪದ್ಮಮಾಲ್‌ನಲ್ಲಿ ನೆರವೇರಿಸಿ ಜವಾಬ್ದಾರಿಗಳನ್ನು ತಿಳಿಸಿದರು. ಮಾಜಿ ಗವರ್ನರ್ ವಸಂತಕುಮಾರ್ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರತಿಭಾ ವಿ. ಹೆಬ್ಬಾರ್ ,ಪ್ರಾಂತ್ಯಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್ ,ವಲಯಾಧ್ಯಕ್ಷ  ಅಜಿತ್ ಕುಮಾರ್ ಮಂಚಿ , ಸ್ಥಾಪಕ ಅಧ್ಯಕ್ಷ ಗಂಗಾಧರ ರೈ,ನಿಕಟಪೂರ್ವ ಅಧ್ಯಕ್ಷ ಜನಾರ್ದನ ಪೆರಾಜೆ ಹಾಗೂ ಪದಾಧಿಕಾರಿಗಳಾದ ರತ್ನಾಕರ ರೈ, ರಾಜೇಶ್ ಶೆಟ್ಟಿ, ಡಾ. ಶ್ರೀನಾಥ್ ಆಳ್ವ ಉಪಸ್ಥಿತರಿದ್ದರು. ಜಯಾನಂದ ಪೆರಾಜೆ ಅತಿಥಿಗಳನ್ನು ಪರಿಚಯಿಸಿದರು. ಗಂಗಾಧರ ಆಳ್ವ, ಉಮೇಶ್ ಬರಿಮಾರು ನಿರೂಪಿಸಿದರು.
ಎಸ್.ಎಸ್.ಎಲ್.ಸಿ. ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕರ್ನಾಟಕ ಪ್ರೌಢ ಶಾಲೆ ಮಾಣಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ, ಸರಕಾರಿ ಪ್ರೌಢಶಾಲೆ ಕಡೇಶ್ವಾಲ್ಯ , ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಪೆರ್ನೆಯ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. 

By Suddi9

Leave a Reply

Your email address will not be published. Required fields are marked *