ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ 14ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು  ನೆತ್ತರಕೆರೆ ವಸಂತಿ ವಿಠ್ಠಲ್ ಶೆಟ್ಟಿ ಮುಂಡಾಜೆಗುತ್ತು ಸಭಾಂಗಣದಲ್ಲಿ ನಡೆಯಿತು.
ಎಡ್ವೆಂಚರ್ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ಸುಳ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ತುಳುವರು ಮೃದು ಮನಸ್ಸಿನವರಾಗಿದ್ದು, ತುಳುನಾಡಿನ ಆಷಾಡ ಮಾಸದ ಮಹತ್ವ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಅನಾವರಣಗೊಳಿಸುವ “ಆಟಿಡೊಂಜಿ ಗಮ್ಮತ್” ಮುಂದಿನ ತಲೆಮಾರುಗಳಿಗೆ  ತಲುಪಿಸುವ ಮಹತ್ತರವಾದ ಕಾರ್ಯವನ್ನು, ನೇತ್ರಾವತಿ ಮಾತೃ ಮಂಡಳಿಯಿಂದ ನಡೆದಿರುವುದು ಶ್ಲಾಘನೀಯವಾಗಿದೆ ಎಂದರು.

ಬಳಿಕ ವಿವಿಧ ಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಎಡ್ವೆಂಚರ್ ಪಿ ಯು ಕಾಲೇಜಿನ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಅಥಿತಿಯಾಗಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಮಾತೃ ಮಂಡಳಿಯ ಸದಸ್ಯೆಯರು ಮನೆಯಲ್ಲಿ ತಯಾರಿಸಿ ತಂದ ಸುಮಾರು 40ವಿವಿಧ ಬಗೆಯ ವಿಶೇಷ ಖಾದ್ಯಗಳ ಸಹಭೋಜನ ನಡೆಯಿತು.
ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಸಂಚಾಲಕಿ ಲಲಿತ ಸುಂದರ್, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಚಾಲಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು

ಶಶಿಕಲಾ ಟೀಚರ್ ಸ್ವಾಗತಿಸಿ,  ಜಯಂತಿ ವಿಶ್ವನಾಥ ಹಾಗೂ ಕು.ವರ್ಷ ಕಾರ್ಯಕ್ರಮ ನಿರೂಪಿಸಿದರು, ಕು. ಸಿಂಧು, ಕು. ಜನನಿ, ಕು.ನಿವೇದಿತಾ, ಕು. ಶ್ರಾವ್ಯ ಸಹಕರಿಸಿದರು. 

 
 

By Suddi9

Leave a Reply

Your email address will not be published. Required fields are marked *