ಬಂಟ್ವಾಳ: ಇಲ್ಲಿನ ಲೊರೆಟ್ಟೊ ಚರ್ಚ್ ನಲ್ಲಿ ಲಾವ್ದಾ ತೊಸಿ ರವಿವಾರ- 2026, ಮಳೆ ಕೊಯ್ಲು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಚರ್ಚ್ ನ ಪರಿಸರ ಆಯೋಗ, ಯುವ ಆಯೋಗ, ಐ.ಸಿ.ವೈ.ಎಂ. ಮತ್ತು ಕ್ಯಾಥೋಲಿಕ್ ಸಭಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತ

ಲೊರೆಟ್ಟೊ ಚರ್ಚ್ ನ ಧರ್ಮಗುರು ಫಾ. ಜೇಮ್ಸ್ ಡಿ ಸೋಜಾ ಅವರುಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಾಂಶುಪಾಲ ಫಾ. ಜೇಸನ್ ಮೋನಿಸ್, ಚರ್ಚ್ ಉಪಾಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಆಲ್ವಿನ್ ಪಿಂಟೊ, ಸರ್ವ ಆಯೋಗಗಳ ಸಂಯೋಜಕ ಸಚಿನ್ ನೊರೊನ್ಹಾ, ಪರಿಸರ ಆಯೋಗದ ಸಂಚಾಲಕ ರಿಚಾರ್ಡ್ ಮಿರಾಂದಾ, ಯುವ ಆಯೋಗದ ಕಾರ್ಯದರ್ಶಿ ಜೇಸನ್ ಫೊನ್ಸೆಕಾ, ಐ.ಸಿ.ವೈ.ಎಂ. ಅಧ್ಯಕ್ಷೆ ಶೈನಾ ರೊಡ್ರಿಗಸ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಚಂದಪ್ಪ ಮೂಲ್ಯ ಅವರು ಮಳೆ ನೀರಿನ ಕೊಯ್ಲಿನ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು.ಇದೇ ವೇಳೆ ಗಿಡ ನಾಟಿ ಮಾಡಲಾಯಿತು.
ಮರಿಯಾ ಡಿ ಸೋಜಾ ಅವರು ಕಾರ್ಯಕ್ರಮ ನಿರೂಪಿಸಿದರು.
