ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತುಚೀಟಿ (ಐಡಿ ಕಾರ್ಡ್) ಮತ್ತು ಬೆಲ್ಟ್ ವಿತರಣೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಹಕಾರದೊಂದಿಗೆ ಮಾಡಲಾಯಿತು.

ಈ ಸಂದರ್ಭ ಉಪಸ್ಥಿತರಿದ್ದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಮೇಶ್ ಸಾಲಿಯಾನ್ ಸಂಚಯಗಿರಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ಸೋಮನಾಥ ಸಾಲಿಯಾನ್, ಸಂಘದ ಸದಸ್ಯರು ಹಾಗೂ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಪಾಲ್ಗೊಂಡು ಮಕ್ಕಳಿಗೆ ಐಡಿ ಮತ್ತು ಬೆಲ್ಟ್ ವಿತರಣೆ ಮಾಡಿ ಶುಭ ಹಾರೈಸಿದರು. ಶಾಲೆಯ ಹಿರಿಯ ಶಿಕ್ಷಕಿ ಹಾಗೂ ಕುಲಾಲ ಸುಧಾರಕ ಸಂಘದ ಸದಸ್ಯೆಯೂ ಆಗಿರುವ ಸುಶೀಲಾ ಲಿಂಗಪ್ಪ ಮಾತನಾಡಿ, ಈ ಯೋಜನೆಗೆ ತಾಲೂಕು ಕುಲಾಲ ಸುಧಾರಕ ಸಂಘದ ಸದಸ್ಯರಾದ ಜಲಜಾಕ್ಷಿ, ಚೆನ್ನಪ್ಪ, ನಮಿತಾ, ಉಮೇಶ್, ಮಾಲತಿ ಮಚ್ಚೇಂದ್ರ, ಜಯಂತಿ ಟೀಚರ್, ನಾರಾಯಣ ಸಿ. ಪೆರ್ನೆ, ಯಾದವ ಕುಲಾಲ್ ಅಗ್ರಬೈಲ್, ಸತೀಶ್ ಕುಲಾಲ್ ಮತ್ತು ಸುಶೀಲಾ ಟೀಚರ್ ಅವರು ಮಕ್ಕಳಿಗೆ ನೆರವಾಗಿದ್ದಾರೆ ಎಂದು ತಿಳಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. 
ಈ ವೇಳೆ ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿನೋದಾ, ಸದಸ್ಯರಾದ ರಮ್ಯಾ, ಶಿವಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಮತ್ತು ಶಿಕ್ಷಕ ವೃಂದ ಈ ಸಂದರ್ಭ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *