ಬಂಟ್ವಾಳ: ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ಇದರ ಸಾಲೆತ್ತೂರು ಶಾಖೆಯ ದಶಮಾನೋತ್ಸವ ಪ್ರಯುಕ್ತ ಸಂಸ್ಥೆಯ ಸದಸ್ಯರು, ಗ್ರಾಹಕರಿಗೆ ಸಾರ್ವಜನಿಕರಿಗರ ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವು ಕೊಳ್ನಾಡು ಗ್ರಾ. ಪಂ. ನ ಸೌಹಾರ್ದ ಸಭಾಭವನ ಜರಗಿತು

ಮಂಗಳೂರು ಎ.ಜೆ. ಹಾಸ್ಪಿಟಲ್ ನ ರಕ್ತನಿಧಿ ಪ್ರಬಂಧಕರಾದ ಪಿ.ಆರ್. ಗೋಪಾಲಕೃಷ್ಣ ಅವರು ಶಿಬಿರದ ಉದ್ಘಾಟಿಸಿ ರಕ್ತದಾನದ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಸ್ಥೆಯು ಬೆಳೆದು ಬಂದ ದಾರಿ. ಸಾಲೆತ್ತೂರು ಶಾಖೆ ಗ್ರಾಹಕರೊಂದಿಗೆ ೧೦ ವರ್ಷ ನಡೆಸಿದ ಆರ್ಥಿಕ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕೊಳ್ನಾಡು ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು , ಹೇಮಲತಾ ಸಿ. ಅಂಚನ್ , ಎ.ಜೆ.ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ| ಫಿರ್ದೋಸ್ ಖಾನ್, ರಂಗನಾಥ ರೈ ಬೆಳಿಯೂರುಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ಅಶ್ರಫ್ ಕೆ., ದೇವದಾಸ್ ಶೆಟ್ಟಿ ಪಾಲ್ತಾಜೆ., ಸಂಸ್ಥೆಯ ಉಪಾಧ್ಯಕ್ಷರಾ ಮಂಜುನಾಥ ರೈ ಅಗರಿ, ನಿರ್ದೇಶಕರಾದ ಗಜೇಂದ್ರ ಪ್ರಭು ಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ಸಾಲ ವಸೂಲಾತಿ ಅಧಿಕಾರಿ ಸದಾಶಿವ ಪುತ್ರನ್, ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀಧರ ಶೆಟ್ಟಿ, ಹಿರಿಯ ಪ್ರಬಂಧಕ ಮೋಹನ್ ಜಿ. ಮೂಲ್ಯ ವೇದಿಕೆಯಲ್ಲಿದ್ದರು.
ಹಿರಿಯ ಪ್ರಬಂಧಕರಾದ ಸಪ್ನಾ ಚಂದ್ರಪ್ರಭ ರವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಬಂಧಕರಾದ ಶುಭಲಕ್ಷ್ಮಿ ಪ್ರಾರ್ಥಿಸಿದರು.ಶಾಖಾಧಿಕಾರಿ ಶೈಲೇಶ್ ಕಕ್ಕೆಪದವು ಸ್ವಾಗತಿಸಿ, ಸಾಲೆತ್ತೂರು ಪ್ರಭಾರ ಶಾಖಾಧಿಕಾರಿ ನಿಶಾಂತ್ ವಂದಿಸಿದರು.
