ಬಂಟ್ವಾಳ: ಶಾಲೆಯಲ್ಲಿ ರಚನೆಯಾಗುವ ವಿವಿಧ ಸಂಘಗಳಲ್ಲಿ ತೊಡಗಿಸಿಕೊಂಡು ಸಣ್ಣ ಪುಟ್ಟ ಜವಾಬ್ದಾರಿಯನ್ನು ನಿರ್ವಹಿಸಿದಾಗ ಭವಿಷ್ಯದಲ್ಲಿಯು ದೊಡ್ಡ ಹುದ್ದೆಗಳು ದೊರೆತಾಗ ಅದನ್ನು ನಿರ್ವಹಿಸಲು ಸಾಧ್ಯ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು.

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ತಮಗೆ ಸಿಕ್ಕಿರುವ ಸ್ಥಾನಕ್ಕನುಗುಣವಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಶಾಲೆಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ. ಮುಂದಿನ ಜೀವನದಲ್ಲೂ ಉತ್ತಮ ಪ್ರಜೆಯಾಗಿ ದೇಶದ ಗೌರವ ಹೆಚ್ಚಿಸಬೇಕು ಎಂದು ಶುಭ ಹಾರೈಸಿದರು.
ಚುನಾಯಿತ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಭಾರತಮಾತೆಗೆ ಪುಷ್ಪಾರ್ಚನೆಗೈದು ಅತಿಥಿ,ಅಭ್ಯಾಗತರಿಂದ ಆರ್ಶೀವಾದದ ಪಡೆದುಕೊಂಡರು. ಹಿರಿಯರು ತಿಲಕಧಾರಣೆ ಮಾಡಿದರು.
ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳೊಗೆ ಸಭಾಪತಿಯಾದ ೭ನೇ ತರಗತಿಯ ಸುಧನ್ವ ಕಾಮತ್ ಪ್ರಮಾಣ ವಚನ ಭೋದಿಸಿದರು.
ಇದೇ ವೇಳೆ ವಿವಿಧ ಸಂಘಗಳಾದ ಕನ್ನಡ ಸಂಘ, ಸಂಸ್ಕೃತ ಸಂಘ, ಇಂಗ್ಲೀಷ್ ಸಂಘ, ವಿಜ್ಞಾನ-ಗಣಿತ ಸಂಘ, ಕ್ರೀಡಾ ಸಂಘ, ಸಾಂಸ್ಕೃತಿಕ ಸಂಘ ಹಾಗೂ ಕೃಷಿ ಸಂಘಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಶಾಲಾ ನಾಯಕನಾಗಿ ಅನ್ವೇಷ್ ಪ್ರಭು, ನಾಯಕಿಯಾಗಿ ಸಮೃದ್ಧಿ ಯು, ಉಪನಾಯಕನಾಗಿ ಮನ್ವಿತ್ ಕುಲಾಲ್ ,ಉಪನಾಯಕಿಯಾಗಿ ಜಾಹ್ನವಿ, ಶಿಕ್ಷಣ ಮಂತ್ರಿಯಾಗಿ ಪ್ರತ್ವಿಕ್ ಮತ್ತು ಸಾನ್ವಿ ಸನಿಲ್, ಆರೋಗ್ಯ ಮಂತ್ರಿಯಾಗಿ ರಿತೇಶ್ ಮತ್ತು ತ್ರಿಶಾ , ಕೃಷಿ ಮಂತ್ರಿಯಾಗಿ ನಿಶಾಲ್ ಮತ್ತು ಪರ್ವಿ , ಸ್ವಚ್ಛತೆ ಹಾಗೂ ನೀರಾವರಿ ಮಂತ್ರಿಯಾಗಿ ಭುವನ್ ಮತ್ತು ರ್ಷಿತಾ, ಕ್ರೀಡಾ ಮಂತ್ರಿಯಾಗಿ ಜೀವಿತ್ ಮತ್ತು ಕುಶ್ಮಿತಾ, ಶಿಸ್ತು ಮಂತ್ರಿಯಾಗಿ ಕೌಶಲ್ ಮತ್ತು ತನ್ವಿ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ಪ್ರಣಾಮ್ ಮತ್ತು ಆರಾಧ್ಯ , ವಾರ್ತಾ ಮಂತ್ರಿಯಾಗಿ ತ್ರಿಶಾನ್ ಮತ್ತು ಪರ್ವಿ, ಸಭಾಪತಿಯಾಗಿ ಸುಧನ್ವ ಕಾಮತ್ ಪ್ರಮಾಣ ವಚನ ಸ್ವೀಕರಿಸಿದರು. ವಿರೋಧಪಕ್ಷದ ನಾಯಕನಾಗಿ ಸ್ಕಂದ ತೇಜ ಮತ್ತು ನಾಯಕಿಯಾಗಿ ಧಾತ್ರಿಕಾ ಆಯ್ಕೆಯಾಗಿದ್ದಾರೆ.
ಕೊಳ್ನಾಡು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕುಲ್ಯಾರು ನಾರಾಯಣ ಶೆಟ್ಟಿ , ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ.ಆರ್ ಶೆಟ್ಟಿ , ಮಂಚಿ ಗ್ರಾಮ ಪಂಚಾಯಂತ್ನ ಪ್ರಥಮ ದರ್ಜೆ ಸಹಾಯಕರಾದ ರೋಹಿಣಿ, ಮುಖ್ಯೋಪಾಧ್ಯಾಯರು ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪುಣ್ಯಶ್ರೀ ಸ್ವಾಗತಿಸಿ, ಗೌರಿ ನಂದಿನಿ ನಿರೂಪಿಸಿ, ಶ್ರಾವ್ಯ ವಂದಿಸಿದರು.
