ಬಂಟ್ವಾಳ: ಜನಪದೀಯವಾಗಿ ಬೆಳೆದು ಬಂದ ಜಾದು ಕಲೆ ಇಂದ್ರಜಾಲ,ಮಹೇಂದ್ರ ಜಾಲ,ಕಣ್ಕಟ್ಟು ವಿದ್ಯೆ ಎಂದು ಪ್ರಸಿದ್ಧ ವಾಗಿದೆ. ಮನರಂಜನೆಯಾಗಿ  ಪ್ರೇಕ್ಷಕರನ್ನು ವಿಸ್ಮಯ ಲೋಕಕ್ಕೆ ಕೊಂಡು ಹೋಗಬಲ್ಲ ವಿಶಿಷ್ಟ ಜಾದು ಕಲೆಗೆ ಪ್ರೋತ್ಸಾಹದ‌ ಅಗತ್ಯವಿದೆ.ಮಾಯಾಲೋಕ ಎಂಬ ಹೆಸರಿನಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿದ ಶ್ಯಾಮ್ ಜಾದುಗಾರ ತಂಡ ಯಶಸ್ವಿಯಾಗಲೆಂದು ಹಿರಿಯ ಶಿಕ್ಷಕ ಜಯಾನಂದ ಪೆರಾಜೆ ಹೇಳಿದರು.

 

ಅವರು ಕಲಾಶ್ರಯ ಬಾಳ್ತಿಲದಲ್ಲಿ ಶ್ಯಾಮ್ ಜಾದುಗಾರ್ ನೇತೃತ್ವದ  ಮಾಯಾಲೋಕ ಜಾದುಪ್ರದರ್ಶನ ಮತ್ತು ವೈವಿಧ್ಯ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾಶ್ರಯ ಮುಖ್ಯಸ್ಥ ಸೂರ್ಯನಾರಾಯಣ ಭಟ್  ಕಶೆಕೋಡಿಯವರ ತಾಯಿ  ಕಲಾವತಿಯವರು ದೀಪಬೆಳಗಿಸಿ ಶುಭಹಾರೈಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ರಬ್ಬರ್ ಮತ್ತುಜೇನು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮೋಹನ್‌ ಪಿ.ಎಸ್. ಮಾತನಾಡಿ ಕಲೆಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯವೆಂದರು.
ವಿಶ್ವಭಾರತಿ90ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು  ಇದರ ಸಂಚಾಲಕ ಪ್ರಶಾಂತ ಹೊಳ್ಳ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ವೇದಿಕೆಯಲ್ಲಿ ಕಲಾವಿದರಾದ ಶ್ಯಾಮ ಭಟ್, ಸುಜಿತ್ ಕಲ್ಲಡ್ಕ ಉಪಸ್ಥಿತರಿದ್ದರು. ಮಳೆಗಾಲದ ಮೊದಲ ಪ್ರದರ್ಶನವನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದರು. 

By Suddi9

Leave a Reply

Your email address will not be published. Required fields are marked *